Thursday, June 4, 2026
Homeತಾಜಾ ಸುದ್ದಿಮೋದಿ ಸಂಪುಟದಲ್ಲಿ ಕುಮಾರಸ್ವಾಮಿ ಅವರಿಗೆ ಮಂತ್ರಿಗಿರಿ ಪಕ್ಕಾ;ಯಾವ ಖಾತೆ ಸಿಗ್ಬೋದು?

ಮೋದಿ ಸಂಪುಟದಲ್ಲಿ ಕುಮಾರಸ್ವಾಮಿ ಅವರಿಗೆ ಮಂತ್ರಿಗಿರಿ ಪಕ್ಕಾ;ಯಾವ ಖಾತೆ ಸಿಗ್ಬೋದು?

- Advertisement -
- Advertisement -

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಇಂದು ಸಂಜೆ 7-15ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇನ್ನು ಮಂಡ್ಯ ಸಂಸದ ಹೆಚ್ ಡಿ ಕುಮಾರಸ್ವಾಮಿ ಅವರಿಗೂ ಸಚಿವ ಸ್ಥಾನ ಸಿಗೋದು ಎನ್ನಲಾಗುತ್ತಿದ್ದು ಯಾವ ಖಾತೆ ಸಿಗುತ್ತೆ ಅನ್ನುತ್ತೆ ಎಂಬ ಕುತೂಹಲ ಹೆಚ್ಚಾಗಿದೆ.ಈ ಬಗ್ಗೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಮೇಲೆ ಬಿಟ್ಟಿದ್ದೇನೆ.

ನನಗೆ ಕೃಷಿಗೆ ಸಂಬಂಧ ಪಟ್ಟಂತೆ ಮೊದಲಿನಿಂದಲೇ ಆಸಕ್ತಿ ಇದೆ. ಮೋದಿ ಅವರು ನನ್ನ ಮೇಲೆ ಮತ್ತು ನನ್ನ ತಂದೆ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದಾರೆ. ಹೀಗಾಗಿ ಅವರು ನನಗೆ ಕೃಷಿ ಖಾತೆ ಕೊಡುವ ವಿಶ್ವಾಸ ಇದೆ ಎಂದು ಎಂದಿದ್ದಾರೆ. ಅಂತಹ ಇಲಾಖೆ ಸಿಕ್ಕರೆ ಖಂಡಿತವಾಗಿ ಒಳ್ಳೆಯ ಕೆಲಸ ಮಾಡುತ್ತೇನೆ. ಜನರ ಮಧ್ಯೆ ಇರಬೇಕು ಅಂತ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಒಟ್ಟಿನಲ್ಲಿ ಇಂದು ಸಂಜೆ ಎಲ್ಲದಕ್ಕೂ ಉತ್ತರ ಸಿಗಲಿದೆ..

- Advertisement -

Latest News

error: Content is protected !!