Thursday, June 4, 2026
Homeಇತರಕೋವಿಡ್ ಟೆಸ್ಟ್ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳಿಂದ ಸಾಮಾನ್ಯ ಜನರ ಸುಲಿಗೆ

ಕೋವಿಡ್ ಟೆಸ್ಟ್ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳಿಂದ ಸಾಮಾನ್ಯ ಜನರ ಸುಲಿಗೆ

- Advertisement -
- Advertisement -

ಬೆಂಗಳೂರು    ರಾಜ್ಯದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಗಳು ಖಾಲಿ ಇಲ್ಲ. ಹಾಗಾಗಿ ಅದೆಷ್ಟೋ ಮಂದಿ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಖಾಸಗಿ ಆಸ್ಪತ್ರೆಗಳ ಜನರನ್ನು ಸುಲಿಗೆ ಮಾಡುತ್ತಿವೆ.

ಅಂದ್ಹಾಗೆ ರಾಜ್ಯಸರ್ಕಾರ ಈಗಾಗಲೇ ಕೋವಿಡ್ ಟೆಸ್ಟ್ ಗೆ 2,200 ರೂಪಾಯಿ ದರ ನಿಗದಿ ಮಾಡಿದೆ. ಆದ್ರೆ ಖಾಸಗಿ ಆಸ್ಪತ್ರೆಗಳಲ್ಲಿ ಇದ್ಯಾವುದು ಲೆಕ್ಕಕ್ಕೇ ಇಲ್ಲ. ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದಾರೆ. 4 ರಿಂದ 5 ಸಾವಿರ ರೂಪಾಯಿ ಕೋವಿಡ್ ಟೆಸ್ಟ್ ಗೆ ತೆಗೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತೆ ಅಂತಾ ಎಚ್ಚರಿಕೆ ನೀಡಿದ್ರೂ ಸಹ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಡೋಂಟ್ ಕೇರ್ ಎನ್ನುವಂತೆ ಅವ್ಯಾಹತವಾಗಿ ವಸೂಲಿ ದಂಧೆ ನಡೆಯುತ್ತಲೇ ಇದೆ. ಇದು ಮೊದಲೇ ಕೊರೊನಾ ಭಯದಲ್ಲಿರುಮ ಮಂದಿಯನ್ನು ಸಂಕಷ್ಟಕ್ಕೆ ತಳ್ಳಿದೆ.

ಮಹಾನಗರಗಳಲ್ಲಿ ದಿನೇ ದಿನೇ ಕೊರೊನಾ ಲಕ್ಷಣಗಳನ್ನು ಜನರಲ್ಲಿ ಕಾಣಿಸಿಕೊಳ್ಳೋದು ಹೆಚ್ಚಾಗುತ್ತಿದೆ. ಹಾಗಾಗಿ ಸ್ವಲ್ಪ ಆರೋಗ್ಯದಲ್ಲಿ ಏರುಪೇರಾದ್ರೆ ಸಾಕು ಜನ ತರಾತುರಿಯಲ್ಲಿ ಹೋಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಟೆಸ್ಟ್ ಮಾಡಿಸಿದ್ರೆ ರಿಪೋರ್ಟ್ ಬರೋದಕ್ಕೆ ತಡವಾಗುತ್ತೆ ಅಂತಾ ಅನಿವಾರ್ಯವಾಗಿ ಖಾಸಗಿ ಲ್ಯಾಬ್ ಗಳ ಮೊರೆ ಹೋಗುತ್ತಿದ್ದಾರೆ. ಇದು ಖಾಸಗಿ ಆಸ್ಪತ್ರೆಗಳ ಪಾಲಿಗೆ ವರವಾಗಿ ಪರಿಣಮಿಸಿದೆ.

- Advertisement -

Latest News

error: Content is protected !!