Thursday, June 4, 2026
Homeಕರಾವಳಿಉಡುಪಿಉಡುಪಿ: ಗ್ಯಾಂಗ್ ವಾರ್ ಹಿನ್ನೆಲೆಯಲ್ಲಿ ಮಣಿಪಾಲದಲ್ಲಿ ರಾತ್ರಿ ಪೊಲೀಸ್ ಕಾರ್ಯಾಚರಣೆ

ಉಡುಪಿ: ಗ್ಯಾಂಗ್ ವಾರ್ ಹಿನ್ನೆಲೆಯಲ್ಲಿ ಮಣಿಪಾಲದಲ್ಲಿ ರಾತ್ರಿ ಪೊಲೀಸ್ ಕಾರ್ಯಾಚರಣೆ

- Advertisement -
- Advertisement -

ಉಡುಪಿ: ಇತ್ತೀಚೆಗೆ ಕುಂಜಿಬೆಟ್ಟಿನಲ್ಲಿ ನಡೆದಿದ್ದ ಗ್ಯಾಂಗ್ ವಾರ್ ಹಿನ್ನೆಲೆಯಲ್ಲಿ ಬುಧವಾರ ತಡರಾತ್ರಿ ಮಣಿಪಾಲದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಮಣಿಪಾಲದ ಸಣ್ಣ ಪುಟ್ಟ ಹೋಟೆಲ್ ಗಳಿಗೆ ಪೊಲೀಸರು ದಾಳಿ ನಡೆಸಿದ್ದು, ಕಾಟಾಚಾರಕ್ಕೆ ಸಣ್ಣ ಹೋಟೆಲ್ ಗಳ ಮೇಲೆ ದಾಳಿ ನಡೆಸಿದ್ದಾರೆ ಎಂಬ ಅರೋಪ ವ್ಯಕ್ತವಾಗಿದೆ.

ರಾತ್ರಿ 10 ಗಂಟೆಗೆ ಬಾರ್, ಪಬ್ ಮುಚ್ಚುವಂತೆ ಪೊಲೀಸರು ಸೂಚಿಸಿದ್ದು ಸಮಯ ಮೀರಿ ತೆರೆದಿದ್ದ ಹೋಟೆಲ್ ಮತ್ತು ಅಂಗಡಿಗಳ ಮೇಲೆ ದಾಳಿ ನಡೆಸಿದ್ದರು.

ಆದರೆ ಅದೇ ಸಮಯದಲ್ಲಿ ತೆರೆದಿದ್ದ ಪಬ್ ಮತ್ತು ಬಾರ್ ಗಳ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬ ಅಸಮಾಧಾನ ಹೋಟೆಲ್ ಮಾಲೀಕರಿಂದ ವ್ಯಕ್ತವಾಗಿದೆ.

- Advertisement -

Latest News

error: Content is protected !!