Saturday, June 13, 2026
Homeತಾಜಾ ಸುದ್ದಿʼಕಾಂತಾರ-1ʼ ಗೆ ಖ್ಯಾತ ಮಾಲಿವುಡ್‌ ನಟ ಜಯರಾಂ ಎಂಟ್ರಿ?

ʼಕಾಂತಾರ-1ʼ ಗೆ ಖ್ಯಾತ ಮಾಲಿವುಡ್‌ ನಟ ಜಯರಾಂ ಎಂಟ್ರಿ?

- Advertisement -
- Advertisement -

ಬೆಂಗಳೂರು: ದೊಡ್ಡಮಟ್ಟದಲ್ಲಿ ʼಕಾಂತಾರ -1ʼ ಮೂಡಿ ಬರಲಿದ್ದು, ಈ ಚಿತ್ರದಲ್ಲಿ ಖ್ಯಾತ ಬಹುಭಾಷಾ ನಟ ಜಯರಾಂ ನಟಿಸಲಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ.

ಟೀಸರ್ ತುಣುಕಿನಿಂದ ಗಮನ ಸೆಳೆದಿರುವ ʼಕಾಂತಾರ-1’ರಲ್ಲಿ ರಿಷಬ್‌ ಹೊರತು ಪಡಿಸಿ ಯಾರೆಲ್ಲ ನಟಿಸಲಿದ್ದಾರೆ ಎನ್ನುವ ಬಗ್ಗೆ ಇದುವರೆಗೆ ಚಿತ್ರತಂಡದಿಂದ ಯಾವ ಅಪ್ಡೇಟ್‌ ಕೂಡ ಸಿಕ್ಕಿಲ್ಲ. ಕರಾವಳಿ ಭಾಗದ ಕಲಾವಿದರೇ ಹೆಚ್ಚಾಗಿ ಸಿನಿಮಾದಲ್ಲಿರಲಿದ್ದಾರೆ ಎಂದು ರಿಷಬ್‌ ಈ ಹಿಂದೆ ಹೇಳಿದ್ದು ಬಿಟ್ಟರೆ ಯಾರೆಲ್ಲಾ ಎನ್ನುವುದನ್ನು ಮಾತ್ರ ಗೌಪ್ಯವಾಗಿ ಇಟ್ಟಿದ್ದಾರೆ. ಇದೀಗ ಲೇಟೆಸ್ಟ್‌ ಅಪ್ಡೇಟ್‌ ವೊಂದು ಸ್ಯಾಂಡಲ್‌ ವುಡ್‌ ವಲಯದಲ್ಲಿ ಹರಿದಾಡಿದೆ.

ಈಗಾಗಲೇ ಶಿವರಾಜ್‌ ಕುಮಾರ್‌ ಅವರ ʼಘೋಸ್ಟ್‌ʼ ಸಿನಿಮಾದಲ್ಲಿ ಖಡಕ್‌ ಪೊಲೀಸ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದ ಜಯರಾಂ ಈಗ ಕರಾವಳಿ ದೈವದ ಕಥೆವುಳ್ಳ ʼಕಾಂತಾರ-1ʼ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದುವರೆಗೆ ಈ ಬಗ್ಗೆ ರಿಷಬ್‌ ಆಗಲಿ ಅಥವಾ ನಿರ್ಮಾಣ ಸಂಸ್ಥೆ ಹೊಂಬಾಳೆ ಆಗಲಿ ಅಧಿಕೃತವಾಗಿ ಯಾವ ಮಾಹಿತಿಯನ್ನು ನೀಡಿಲ್ಲ. ಈಗಾಗಲೇ ʼಕಾಂತಾರ-1ʼ ಸಿನಿಮಾದ ಓಟಿಟಿ ರೈಟ್ಸ್‌ ಅಮೇಜಾನ್‌ ಪ್ರೈಮ್‌ ಗೆ 120 ಕೋಟಿ ರೂ.ಗೆ ಸೇಲ್‌ ಆಗಿದೆ. ಮುಂದಿನ ವರ್ಷದ ಸಿನಿಮಾ ರಿಲೀಸ್‌ ಆಗುವ ಸಾಧ್ಯತೆಯಿದೆ.

- Advertisement -

Latest News

error: Content is protected !!