Saturday, June 13, 2026
Homeಮನರಂಜನೆನಂಜನಗೂಡಿನ ಶ್ರೀಕಂಠನ ದರ್ಶನ ಪಡೆದ ನಟಿ ಶಿಲ್ಪಾ ಶೆಟ್ಟಿ 

ನಂಜನಗೂಡಿನ ಶ್ರೀಕಂಠನ ದರ್ಶನ ಪಡೆದ ನಟಿ ಶಿಲ್ಪಾ ಶೆಟ್ಟಿ 

- Advertisement -
- Advertisement -

ಮೈಸೂರು;  ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ  ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಂಗಳವಾರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ಪೂಜೆ ಸಲ್ಲಿಸಿದ ದೇವಾಲಯದ ವಸಂತ ಮಂಟಪದಲ್ಲಿ ಕೆಲ ಕಾಲ ಕುಳಿತು ಧ್ಯಾನ ಮಾಡಿದ್ರು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿಲ್ಪಾ ಶೆಟ್ಟಿ, ಮೈಸೂರಿನ ಇಲವಾಲದಲ್ಲಿ ನಮ್ಮ ಸಿನಿಮಾದ ಶೂಟಿಂಗ್ ನಡೆಯುತ್ತಿದೆ, ನಾನು ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ದೇವಾಲಯದ ಮಹಿಮೆ ಬಗ್ಗೆ ಬಹಳ ಕೇಳಿದ್ದೆ. ಹೀಗಾಗಿ ಇಲ್ಲಿಗೆ ಬಂದಿದ್ದೇನೆ, ದೇವರ ದರ್ಶನ ಪಡೆದು ಸಂತೋಷವಾಯ್ತು ಎಂದು ಹರ್ಷ ವ್ಯಕ್ತಪಡಿಸಿದರು.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹು ನಿರೀಕ್ಷೆಯ ಕೆಡಿ – ದಿ ಡೆವಿಲ್’ ಸಿನಿಮಾದಲ್ಲಿ ಶಿಲ್ಪ ಶೆಟ್ಟಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್​ ದತ್​,  ಕೂಡ ಅಭಿನಯಿಸುತ್ತಿದ್ದು, ರವಿಚಂದ್ರನ್​, ರಮೇಶ್​ ಅರವಿಂದ್​ ಅವರಂತಹ ಘಟಾನುಘಟಿ ಕಲಾವಿದರಿದ್ದಾರೆ.

- Advertisement -

Latest News

error: Content is protected !!