Friday, June 5, 2026
Homeಕರಾವಳಿಮಂಗಳೂರುಶಿರಾಡಿ ಘಾಟ್ ನಲ್ಲಿ ಇನ್ನೋವಾ ಕಾರು ಹಾಗೂ ಕಂಟೇನರ್ ನಡುವೆ ಡಿಕ್ಕಿ; ತಾಯಿ ಮತ್ತು ಮಗ...

ಶಿರಾಡಿ ಘಾಟ್ ನಲ್ಲಿ ಇನ್ನೋವಾ ಕಾರು ಹಾಗೂ ಕಂಟೇನರ್ ನಡುವೆ ಡಿಕ್ಕಿ; ತಾಯಿ ಮತ್ತು ಮಗ ಸಾವು

- Advertisement -
- Advertisement -

ಗುಂಡ್ಯ: ಇನ್ನೋವಾ ಕಾರು ಹಾಗೂ ಕಂಟೇನರ್ ನಡುವೆ ಡಿಕ್ಕಿಯಾಗಿ ತಾಯಿ ಮತ್ತು ಮಗ ಸಾವನ್ನಪ್ಪಿರುವ ಘಟನೆ ಶಿರಾಡಿ ಘಾಟ್ ನಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ತಾಯಿ ಶಫಿಯಾ ಹಾಗೂ ಮಗ ಶೌಫಿಕ್ ಮೃತ ದುರ್ದೈವಿ.

ಬೆಂಗಳೂರಿನಿಂದ ಬಂಟ್ವಾಳ ಕಡೆಗೆ ಬರುವ ಇನ್ನೋವಾ ಕಾರು ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ಕಂಟೇನರ್ ನಡುವೆ ಡಿಕ್ಕಿಯಾಗಿದೆ.ಪರಿಣಾಮ ಕಾರಿನಲ್ಲಿದ್ದ ತಾಯಿ ಹಾಗೂ ಮಗ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!