Saturday, June 13, 2026
Homeಕರಾವಳಿಮಂಗಳೂರು; ಪ್ರೇಯಸಿ ಸಾವಿನ ನೋವಿನಿಂದ ನೊಂದು ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ಮಂಗಳೂರು; ಪ್ರೇಯಸಿ ಸಾವಿನ ನೋವಿನಿಂದ ನೊಂದು ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

- Advertisement -
- Advertisement -

ಮಂಗಳೂರು; ಪ್ರೇಯಸಿ ಸಾವಿನ ನೋವಿನಿಂದ ನೊಂದು ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೈಲೊಟ್ಟು ನಿವಾಸಿ ಕಾರ್ತಿಕ್‌ (20) ಮೃತ ಯುವಕ. ಅವರು ಮೂಡಬಿದಿರೆ ತಾಲೂಕಿನ ಯುವತಿಯನ್ನು ಪ್ರೀತಿಸುತ್ತಿದ್ದರು. ಬಿಬಿಎಂ ಓದುತ್ತಿದ್ದಾಗ ಅವರ ನಡುವೆ ಪ್ರೀತಿ ಬೆಳೆದಿತ್ತು ಎನ್ನಲಾಗಿದೆ.

ಮನೆಯಲ್ಲಿ ಇಬ್ಬರ ಪ್ರೀತಿಯ ವಿಷಯ ತಿಳಿದ ಬಳಿಕ ಯುವತಿಯನ್ನು ಆಕೆಯ ಮನೆಯವರು ಕಾಲೇಜು ಬಿಡಿಸಿ, ಮೂಡುಬಿದಿರೆಯ ಮನೆಯಲ್ಲೇ ಉಳಿಸಿಕೊಂಡಿದ್ದರು. ಆ ಯುವತಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಳು. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಕಾರ್ತಿಕ್‌ ಆಕೆಯ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ಶನಿವಾರ ಮೂಡಬಿದಿರೆಗೆ ತೆರಳಿದ್ದರು. ಆಕೆಯ ಮೃತದೇಹವನ್ನು ವೀಕ್ಷಿಸಲು ಮನೆಯವರು ಅವಕಾಶ ನೀಡಿರಲಿಲ್ಲ. ಇದರಿಂದ ಯುವಕ ಬೇಸರಗೊಂಡಿದ್ದ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಕಾರ್ತಿಕ್ ಆಪ್ತರು ಹೇಳಿದ್ದಾರೆ.

- Advertisement -

Latest News

error: Content is protected !!