- Advertisement -
![]()
- Advertisement -
ಬೆಳ್ತಂಗಡಿ ವಕೀಲರ ಸಂಘದಿಂದ ಪ್ರಧಾನ ಹಿರಿಯ ನ್ಯಾಯಾಧೀಶರಾದ ದೇವರಾಜು ಹೆಚ್ ಎಂ ರವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ವಸಂತ ಮರಕಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಜೆ ಎಂ ಎಫ್ ಸಿ ಬೆಳ್ತಂಗಡಿ ಇದರ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಡಿ ಸಂದೇಶ್ ಕೆ ಜೆ, ಹಿರಿಯ ವಕೀಲರ ಸಮಿತಿಯ ಅಧ್ಯಕ್ಷರಾದ ಅಲೋಶಿಯಸ್ ಎಸ್ ಲೋಬೋ, ವಕೀಲರ ಸಂಘದ ರಿ ಬೆಳ್ತಂಗಡಿ ಇದರ ಪ್ರಧಾನ ಕಾರ್ಯದರ್ಶಿಯಾದ ನವೀನ್ ಬಿ ಕೆ ಭಾಗಿಯಾಗಿದ್ದರು.ಕಾರ್ಯಕ್ರಮದಲ್ಲಿ ಅತಿಥಿಗಳನ್ನು ನವೀನ್ ಬಿ ಕೆ ಸ್ವಾಗತಿಸಿದರು. ಉಷಾ ಪ್ರಾರ್ಥಿಸಿದರು. ಪ್ರಶಾಂತ್ ಎಂ ಧನ್ಯವಾದ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘ ರಿ ಬೆಳ್ತಂಗಡಿ ಯ ಉಪಾಧ್ಯಕ್ಷರಾದ ಅಶೋಕ್ ಕರಿಯನೆಲ, ಖಜಾಂಚಿಯಾದ ಪ್ರಶಾಂತ್ ಎಂ, ಅಸ್ಮಾ, ಮತ್ತಿತರರು ಭಾಗಿಯಾಗಿದ್ದರು.
- Advertisement -


