- Advertisement -
![]()
- Advertisement -
ಬೆಳ್ತಂಗಡಿ: ಮಾಜಿ ಸಚಿವ ಮತ್ತು ಶಾಸಕ ಎಸ್. ಸುರೇಶ್ ಕುಮಾರ್ ಬೆಳ್ತಂಗಡಿ ತಾಲೂಕಿನ ಸುಳ್ಕೇರಿ ಗ್ರಾಮಕ್ಕೆ ಭೇಟಿ ನೀಡಿದ್ದರು.
ವೇಣೂರು ಹೋಬಳಿಯ ಸುಳ್ಕೇರಿ ಗ್ರಾಮದಲ್ಲಿ ಕೊರಗ ಮಲೆಕುಡಿಯ ಅವರ ಮನೆಗೆ ಸೆಲ್ಕೋ ಸಂಸ್ಥೆಯವರು ಕೊಡುಗೆಯಾಗಿ ನೀಡಿರುವ ಸೋಲಾರ್ ದೀಪದ ವ್ಯವಸ್ಥೆಯ ವೀಕ್ಷಣೆಗಾಗಿ ಸುರೇಶ್ ಕುಮಾರ್ ಭೇಟಿ ನೀಡಿದ್ದರು.
ಕೊರಗ ಮಲೆಕುಡಿಯ ಅವರ ಮನೆಗೆ ಭೇಟಿ ನೀಡಿದ ಬಳಿಕ ಅದೇ ಪ್ರದೇಶದಲ್ಲಿ ಏಳು ಕುಟುಂಬಗಳ ಸದಸ್ಯರ ಜೊತೆ ಸುರೇಶ್ ಕುಮಾರ್ ಸಂವಾದ ನಡೆಸಿದರು.
ಕೊರಗ ಮಲೆ ಕುಡಿಯ ಅವರ ಮನೆಗೆ ಸೆಲ್ಕೋ ಸಂಸ್ಥೆಯಿಂದ ಸೋಲಾರ್ ದೀಪ ಅಳವಡಿಸಿದ ಬಳಿಕ ಕಡೇಲು ಗ್ರಾಮ ಪಂಚಾಯತ್ ನಿಂದ ಮನೆ ಕೂಡಾ ದುರಸ್ತಿ ಮಾಡಲಾಗಿದೆ.
ಸೆಲ್ಕೋ ಸಂಸ್ಥೆಯ ಗುರುಪ್ರಕಾಶ್ ಶೆಟ್ಟಿ, ಉದಯ್, ಆಶಾ ಕಾರ್ಯಕರ್ತೆ ಗಿರಿಜಾ, ಸುರೇಶ್ ನಾಯಕ್, ಗಿರೀಶ್ ಗೌಡ ಮತ್ತು ಕೆಂಪರಾಜು ಈ ವೇಳೆ ಉಪಸ್ಥಿತರಿದ್ದರು.
- Advertisement -


