Thursday, June 4, 2026
Homeಕರಾವಳಿಉಡುಪಿಉಡುಪಿ: ಜೈಲಿನಲ್ಲಿ ವಿಚಾರಣಾಧೀನ ಖೈದಿ ಹೃದಯಾಘಾತದಿಂದ ಸಾವು

ಉಡುಪಿ: ಜೈಲಿನಲ್ಲಿ ವಿಚಾರಣಾಧೀನ ಖೈದಿ ಹೃದಯಾಘಾತದಿಂದ ಸಾವು

- Advertisement -
- Advertisement -

ಉಡುಪಿ: ಜೈಲಿನಲ್ಲೇ ವಿಚಾರಾಧೀನ ಖೈದಿಗೆ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಹಿರಿಯಡ್ಕದಲ್ಲಿ ಸಂಭವಿಸಿದೆ.

ಹಿರಿಯಡ್ಕ ಸಬ್ ಜೈಲಿನಲ್ಲಿ‌ ವಿಚಾರಣಾಧೀನ ಖೈದಿಯಾಗಿದ್ದ ಅನೂಪ್ ಶೆಟ್ಟಿ (38) ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಸಂಜೆ ವೇಳೆ ಅನೂಪ್ ಶೆಟ್ಟಿಗೆ ಎದೆ ನೋವು ಕಾಣಿಸಿಕೊಂಡಿದ್ದು ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಸಾವು ಸಂಭವಿಸಿದೆ.

ಕುಂದಾಪುರದ ಫೈನಾನ್ಶಿಯರ್ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣದ ಆರೋಪಿಯಾಗಿದ್ದ ಅನೂಪ್ ಶೆಟ್ಟಿ ಎರಡೂವರೆ ವರ್ಷಗಳಿಂದ ವಿಚಾರಾಧೀನ ಖೈದಿಯಾಗಿದ್ದ ಎಂದು ತಿಳಿದುಬಂದಿದೆ.

ಖೈದಿ ಅನೂಪ್ ಶೆಟ್ಟಿಗೆ ಎದೆನೋವು ಕಾಣಿಸಿಕೊಂಡಿರುವ ಮಾಹಿತಿ ತಿಳಿದ ಕೂಡಲೇ ಜೈಲಿನ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದಿದ್ದರಾದರೂ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ.

- Advertisement -

Latest News

error: Content is protected !!