- Advertisement -
![]()
- Advertisement -
ಕೊಡಗಿನ ಸೋಮವಾರಪೇಟೆಯಲ್ಲಿ ಎಸ್ಸೆಸೆಲ್ಸಿ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಹತ್ಯೆಗೈದ ಆರೋಪಿ ಓಂಕಾರಪ್ಪ ಇಂದು ಮುಂಜಾನೆ ಪೊಲೀಸರಿಗೆ ಶರಣಾಗಿದ್ದಾನೆ.
ಸೋಮವಾರಪೇಟೆ ತಾಲೂಕಿನ ಸುರ್ಲಬಿ ಗ್ರಾಮದಲ್ಲಿ 16 ವರ್ಷದ ಮೀನಾ ಅನ್ನೋ ಬಾಲಕಿಯ ಜೊತೆ ಓಂಕಾರಪ್ಪ ನಿಶ್ಚಿತಾರ್ಥ ಮಾಡಿಕೊಳ್ಳೋದಕ್ಕೆ ಸಿದ್ಧವಾಗಿದ್ದ. ಈ ವಿಚಾರ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅದನ್ನು ತಡೆದಿದ್ದರು. ಇದರಿಂದ ಕೋಪಗೊಂಡ ಓಂಕಾರಪ್ಪ ಅಲಿಯಾಸ್ ಪ್ರಕಾಶ್ ಗುರುವಾರ ರಾತ್ರಿ ಮೀನಾಳ ಮನೆಗೆ ಬಂದು ಆಕೆಯನ್ನು ಕರೆದುಕೊಂಡು ಹೋಗಿ ಕಾಡಿನಂಚಿನಲ್ಲಿ ರುಂಡ ಕಡಿದು ಕೊಲೆ ಮಾಡಿ ರುಂಡ ಸಮೇತ ಪರಾರಿರಯಾಗಿದ್ದ.
ಇನ್ನು ನಿನ್ನೆ ಆರೋಪಿ ಓಂಕಾರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸುದ್ದಿಯಾಗಿತ್ತು. ಆದರೆ ಇಂದು ತನ್ನ ಮನೆಯ ಸಮೀಪದಲ್ಲೆ ಇಂದು ಮುಂಜಾನೆ ಪೊಲೀಸರಿಗೆ ಶರಣಾಗಿದ್ದಾನೆ. ಸದ್ಯ ಆತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
- Advertisement -


