Thursday, June 4, 2026
Homeಕರಾವಳಿಮಂಗಳೂರುಮೂಡಬಿದಿರೆಯಲ್ಲಿ ರಾಸಾಯನಿಕ ಬಳಸಿ ಹಣ್ಣು ಮಾಡಲ್ಪಟ್ಟ ಮಾವು ಮಾರಾಟ; ಅಧಿಕಾರಿಗಳಿಂದ ದಾಳಿ

ಮೂಡಬಿದಿರೆಯಲ್ಲಿ ರಾಸಾಯನಿಕ ಬಳಸಿ ಹಣ್ಣು ಮಾಡಲ್ಪಟ್ಟ ಮಾವು ಮಾರಾಟ; ಅಧಿಕಾರಿಗಳಿಂದ ದಾಳಿ

- Advertisement -
- Advertisement -

ಮೂಡಬಿದಿರೆ: ರಾಸಾಯನಿಕ ಬಳಸಿ ಕೃತಕವಾಗಿ ಮಾವಿನಕಾಯಿಗಳನ್ನು ಹಣ್ಣು ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ತಪಾಸಣೆ ಅಧಿಕಾರಿಗಳು ಮೂಡಬಿದಿರೆಯಲ್ಲಿ ದಾಳಿ ನಡೆಸಿದ್ದಾರೆ.

ಮೂಡಬಿದಿರೆ ಪುರಸಭೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ತಪಾಸಣೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದು, ದಾಳಿ ವೇಳೆ ಕೃತಕವಾಗಿ ಹಣ್ಣು ಮಾಡಲ್ಪಟ್ಟ ಮಾವಿನ ಹಣ್ಣುಗಳು ಪತ್ತೆಯಾಗಿವೆ.

ಸಂತೆ‌ಯಲ್ಲಿನ ಹಣ್ಣಿನ ಅಂಗಡಿಗಳು ಹಾಗೂ ರಸ್ತೆ ಬದಿ ಹಣ್ಣು ವ್ಯಾಪಾರ ಮಳಿಗೆಗಳಿಗೆ ದಾಳಿ ನಡೆಸಲಾಗಿದ್ದು, ರಾಸಾಯನಿಕ ಬಳಕೆ ಪತ್ತೆಯಾದ ಮಾವಿನ ಹಣ್ಣುಗಳ ರಾಶಿಯನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಇನ್ನು ಮುಂದೆ ಕೃತಕವಾಗಿ ಹಣ್ಣು ಮಾಡಿದ ಮಾವಿನ ಹಣ್ಣುಗಳನ್ನು ಮಾರಾಟ ಮಾಡದಂತೆ ವ್ಯಾಪಾರಿಗಳಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

- Advertisement -

Latest News

error: Content is protected !!