Saturday, June 6, 2026
Homeಪ್ರಮುಖ-ಸುದ್ದಿದಕ್ಷಿಣಕನ್ನಡದಲ್ಲಿ ಇಂದು ಬರೋಬ್ಬರಿ 147 ಕೊರೊನಾ ಕೇಸುಗಳು , ಇಬ್ಬರು ಕೋವಿಡ್-19ಗೆ...

ದಕ್ಷಿಣಕನ್ನಡದಲ್ಲಿ ಇಂದು ಬರೋಬ್ಬರಿ 147 ಕೊರೊನಾ ಕೇಸುಗಳು , ಇಬ್ಬರು ಕೋವಿಡ್-19ಗೆ ಬಲಿ, ಉಡುಪಿಯಲ್ಲಿ ಇವತ್ತು 45 ಪಾಸಿಟಿವ್ ಪ್ರಕರಣಗಳು ಪತ್ತೆ

- Advertisement -
- Advertisement -

ಮಂಗಳೂರು :  ದಕ್ಷಿಣಕನ್ನಡದಲ್ಲಿ ಇವತ್ತು ಬರೋಬ್ಬರಿ 147 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಕಳೆದ ಒಂದು ವಾರಕ್ಕೆ ಹೋಲಿಸಿದ್ರೆ ನಿನ್ನೆ 75 ಪ್ರಕರಣಗಳು ಕಂಡು ಬಂದಿದ್ದು ಕೊಂಚ ಸಮಾಧಾನ ತರಿಸಿತ್ತು. ಆದ್ರಿವತ್ತು ಬರೋಬ್ಬರಿ 147 ಪ್ರಕರಣಗಳು ವರದಿಯಾಗಿರೋದು ಆತಂಕ್ಕೆ ಕಾರಣವಾಗಿದೆ.

ಇನ್ನು ಕೊರೊನಾಗೆ ಜಿಲ್ಲೆಯಲ್ಲಿ ಇವತ್ತು ಇಬ್ಬರು ಬಲಿಯಾಗಿದ್ದಾರೆ. ಇಂದು 36 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ ಸದ್ಯ 662 ಸಕ್ರೀಯ ಕೊರೊನಾ ಪ್ರಕರಣಗಳಿವೆ. ಇದುವರೆಗೂ ಜಿಲ್ಲೆಯಲ್ಲಿ 22 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಉಡುಪಿಯಲ್ಲಿ ಇವತ್ತು 45 ಕೊರೊನಾ ಕೇಸುಗಳು ದಾಖಲಾಗಿವೆ. ಉಡುಪಿಯಲ್ಲಿ 193  ಸಕ್ರೀಯ ಪ್ರಕರಣಗಳಿದ್ದು, 22 ಜನ ಇವತ್ತು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

- Advertisement -

Latest News

error: Content is protected !!