Thursday, June 4, 2026
Homeಅಪರಾಧಮಣಿಪಾಲದ ಖಾಸಗಿ ಬಸ್‌ ಮಾಲಕನಿಂದ ನಿರ್ವಾಹಕನಿಗೆ ಹಲ್ಲೆ, ಜೀವಬೆದರಿಕೆ; ದೂರು ದಾಖಲು

ಮಣಿಪಾಲದ ಖಾಸಗಿ ಬಸ್‌ ಮಾಲಕನಿಂದ ನಿರ್ವಾಹಕನಿಗೆ ಹಲ್ಲೆ, ಜೀವಬೆದರಿಕೆ; ದೂರು ದಾಖಲು

- Advertisement -
- Advertisement -

ಉಡುಪಿ: ಖಾಸಗಿ ಬಸ್‌ ಮಾಲಕನೋರ್ವ ಸಂಸ್ಥೆಯ ನಿರ್ವಾಹಕರೊಬ್ಬರಿಗೆ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವ ಬಗ್ಗೆ ದೂರು ದಾಖಲಾಗಿದೆ.

ಮಾಲಕ ಸೈಫುದ್ದೀನ್‌ ತನ್ನದೇ ಬಸ್‌ನಲ್ಲಿ 4 ವರ್ಷಗಳಿಂದ ನಿರ್ವಾಹಕರಾಗಿರುವ ಮೊಹಮ್ಮದ್‌ಶಹನ್‌ ಅವರಿಗೆ ಹಲ್ಲೆ ನಡೆಸಿದ್ದಾರೆ.

ಘಟನೆಯ ವಿವರ: ಮೇ 4ರಂದು ಮಣಿಪಾಲದಲ್ಲಿರುವ ಸಂಸ್ಥೆಯ ಕಾಂಪೌಂಡ್‌ ಒಳಗೆ ಕುಳಿತಿದ್ದಾಗ ಸೈಫುದ್ದೀನ್‌ ಬಂದು, “ನೀನು ಬೇರೊಂದು ಕಂಪೆನಿಯ ಬಸ್ಸಿನ ನಿರ್ವಾಹಕ ನವೀನ್‌ಗೆ ಯಾಕೆ ಬೈದದ್ದು” ಎಂದು ಪ್ರಶ್ನಿಸಿ ಕಾಲಿನಿಂದ ಶಹನ್‌ ಅವರ ಹೊಟ್ಟೆಗೆ ತುಳಿದಿದ್ದಾರೆ. ಈ ವೇಳೆ ಕೆಳಗೆ ಬಿದ್ದ ಶಹನ್‌ನ ಅಂಗಿಯ ಕಾಲರ್‌ ಹಿಡಿದು ಕುತ್ತಿಗೆಯನ್ನು ಗೋಡೆಗೆ ದೂಡಿಟ್ಟು ಉಸಿರುಗಟ್ಟುವಂತೆ ಮಾಡಿದ್ದಾರೆ. ಅನಂತರ ಕಣ್ಣು ಹಾಗೂ ಮೂಗಿಗೆ ರಕ್ತ ಬರುವಂತೆ ಹೊಡೆದಿದ್ದಾರೆ. ಅಲ್ಲದೆ ಜೀವಬೆದರಿಕೆಯನ್ನೂ ಹಾಕಿದ್ದಾರೆ ಎಂದು ಮೊಹಮ್ಮದ್‌ ಶಹನ್‌ ಅವರು ಮಣಿಪಾಲ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!