Sunday, June 7, 2026
Homeತಾಜಾ ಸುದ್ದಿಅಸ್ಸಾಂನಲ್ಲಿ ಪ್ರವಾಹ: 18 ಜಿಲ್ಲೆ ಸಂಪೂರ್ಣ ಜಲಾವೃತ, ಸಾವಿನ ಸಂಖ್ಯೆ 37 ಕ್ಕೆ ಏರಿಕೆ

ಅಸ್ಸಾಂನಲ್ಲಿ ಪ್ರವಾಹ: 18 ಜಿಲ್ಲೆ ಸಂಪೂರ್ಣ ಜಲಾವೃತ, ಸಾವಿನ ಸಂಖ್ಯೆ 37 ಕ್ಕೆ ಏರಿಕೆ

- Advertisement -
- Advertisement -

ನವದೆಹಲಿ : ಅಸ್ಸಾಂ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ ಪ್ರವಾಹಕ್ಕ ಬಲಿಯಾದವರ ಸಂಖ್ಯೆ 37 ಕ್ಕೆ ಏರಿಕೆಯಾಗಿದೆ.

ದೇಮಾಜಿ, ಲಾಕೀಂಪುರ್, ಬಿಸ್ವನಾಥ್, ಡರ್ರಾಂಗ್, ನಾಲ್ಬಾರಿ, ಬಾರ್ಪೆಟಾ ಸೇರಿದಂತೆ 18 ಜಿಲ್ಲೆಗಳಲ್ಲಿ 11 ಲಕ್ಷ ಮಂದಿ ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ್ದಾರೆ. 1,412 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ. 53,348 ಹೆಕ್ಟೇರ್​ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದೆ ಎಂದು ತಿಳಿದು ಬಂದಿದೆ.

ಇನ್ನು, ಸೂರು ಕಳೆದುಕೊಂಡ 6,531 ಜನರಿಗೆ 171 ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಜತೆಗೆ ಪ್ರವಾಹ ಸಂಬಂಧ ಮಾತಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಬೇಕಾದ ಎಲ್ಲಾ ನೆರವು ನೀಡುವುದಾಗಿ ತಿಳಿಸಿದ್ದಾರೆ..

- Advertisement -

Latest News

error: Content is protected !!