Thursday, June 4, 2026
Homeಕರಾವಳಿಕಟೀಲು ದುರ್ಗಾ ಪರಮೇಶ್ವರಿ ಜಾತ್ರೆ ಪ್ರಯುಕ್ತ ಅಗ್ನಿ ಕಾದಾಟ ವಿಶೇಷ ಅಚರಣೆ

ಕಟೀಲು ದುರ್ಗಾ ಪರಮೇಶ್ವರಿ ಜಾತ್ರೆ ಪ್ರಯುಕ್ತ ಅಗ್ನಿ ಕಾದಾಟ ವಿಶೇಷ ಅಚರಣೆ

- Advertisement -
- Advertisement -

ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವರ ಜಾತ್ರೆಯ ಹಿನ್ನೆಲೆಯಲ್ಲಿ ದೇವಸ್ಥಾನದ ಮುಂಭಾಗ ಅಗ್ನಿ ಕಾದಾಟ ಸಂಪ್ರದಾಯ ಆಚರಣೆ ನಡೆದಿದೆ.

ಜಾತ್ರೆಯ ಹಿನ್ನೆಲೆಯಲ್ಲಿ ವಿಶೇಷ ಆಚರಣೆ ನಡೆದಿದ್ದು, ಅತ್ತೂರು ಮತ್ತು ಕೊಡೆತ್ತೂರು ಗ್ರಾಮಸ್ಥರ ನಡುವೆ ಅಗ್ನಿ ಕಾದಾಟ ನಡೆದಿದೆ.

ಹರಕೆ ತೀರಿಸಲು ಗ್ರಾಮಸ್ಥರ ನಡುವೆ ಬೆಂಕಿಯ ಕಾದಾಟ ನಡೆಯುತ್ತಿದ್ದು, ಜಾತ್ರೆಯ ಕೊನೆಯ ದಿನ ನಡೆಯುವ ಆಚರಣೆ ಇದಾಗಿದೆ.

ಅಗ್ನಿ ಜ್ವಾಲೆಯ ದೀವಟಿಗೆಯನ್ನು ಒಬ್ಬರಿಗೊಬ್ಬರು ಎಸೆಯುವ ಆಚರಣೆ ಇದಾಗಿದ್ದು,‌ ಭಾಗವಹಿಸಿದ ಎರಡು ಗ್ರಾಮಗಳ ತಂಡಗಳಿಗೂ ದೇವರ ಅವಭೃತದ ಬಳಿಕ ಪ್ರಸಾದ ವಿತರಣೆ ನಡೆಯಿತು.

ತೆಂಗಿನ ಗರಿಯ ದೀವಟಿಗೆಯ ಮೂಲಕ ನಡೆಯುವ ಕಾದಾಟದಲ್ಲಿ ಈ ಬಾರಿ ಮುನ್ನೂರಕ್ಕೂ ಹೆಚ್ಚು ಭಕ್ತರು ಭಾಗಿಯಾಗಿದ್ದರು.

- Advertisement -

Latest News

error: Content is protected !!