Monday, June 8, 2026
Homeತಾಜಾ ಸುದ್ದಿಕಾಕತಾಳೀಯ... ಪತ್ನಿ ನಿಧನದ ದಿನದಂದೇ ಮೃತರಾದ ದ್ವಾರಕೀಶ್..! ನಾಳೆ ಚಿತ್ರಮಂದಿರ ಬಂದ್

ಕಾಕತಾಳೀಯ… ಪತ್ನಿ ನಿಧನದ ದಿನದಂದೇ ಮೃತರಾದ ದ್ವಾರಕೀಶ್..! ನಾಳೆ ಚಿತ್ರಮಂದಿರ ಬಂದ್

- Advertisement -
- Advertisement -

ಬೆಂಗಳೂರು: ಕಾಕತಾಳೀಯ ಎಂಬಂತೆ ಪತ್ನಿಯನ್ನು ಕಳೆದುಕೊಂಡ ದಿನವೇ ನಟ ದ್ವಾರಕೀಶ್ ಕೂಡ ಮೃತಪಟ್ಟಿದ್ದಾರೆ. 

ದ್ವಾರಕೀಶ್ ಪತ್ನಿ ಅಂಬುಜಾ ಅವರು ಏಪ್ರಿಲ್ 16, 2021 ನಿಧನರಾಗಿದ್ದರು. ಇದೀಗ ದ್ವಾರಕೀಶ್ ಕೂಡ ಇದೇ ದಿನ(ಏ.16) ಇಹಲೋಕವನ್ನು ತ್ಯಜಿಸಿದ್ದಾರೆ. ಬೆಳಗ್ಗೆ 9.45ಕ್ಕೆ ಅಂಬುಜಾ ಅವರು ಪ್ರಾಣಬಿಟ್ಟಿದ್ದರೆ, ದ್ವಾರಕೀಶ್ ಕೂಡ ಅದೇ ಹೊತ್ತಿಗೆ ಅಗಲಿದ್ದಾರೆ ಎಂದು ಅವರ ಪುತ್ರ ಯೋಗೀಶ್ ಮಾಹಿತಿ ನೀಡಿದ್ದಾರೆ.

ನಾಳೆ ಚಿತ್ರರಂಗ ಬಂದ್‌: ಕರುನಾಡ ಕುಳ್ಳ ದ್ವಾರಕೀಶ್ ನಿಧನರಾದ ಹಿನ್ನೆಲೆಯಲ್ಲಿ ನಾಳೆ ಚಿತ್ರರಂಗ ಸಂಪೂರ್ಣ ಸ್ತಬ್ಧವಾಗಲಿವೆ. ದ್ವಾರಕೀಶ್‌ ಅವರಿಗೆ ಗೌರವ ಪೂರ್ವಕವಾಗಿ ನಾಳೆ ಚಿತ್ರರಂಗ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಫಿಲಂ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್ ತಿಳಿಸಿದ್ದಾರೆ.

- Advertisement -

Latest News

error: Content is protected !!