Saturday, June 6, 2026
Homeತಾಜಾ ಸುದ್ದಿಮನೆಯಂಗಳದಲ್ಲೇ ಕಾದಾಟ ನಡೆಸಿದ ಕಾಡಾನೆಗಳು

ಮನೆಯಂಗಳದಲ್ಲೇ ಕಾದಾಟ ನಡೆಸಿದ ಕಾಡಾನೆಗಳು

- Advertisement -
- Advertisement -

ಹಾಸನ; ಮನೆಯಂಗಳದಲ್ಲೇ ಕಾಡಾನೆಗಳು ಕಾದಾಟ ನಡೆಸಿದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಹುಲ್ಲೇಮಕ್ಕಿ ಗ್ರಾಮದ ಯೂನುಸ್ ಎಂಬವರ ಮನೆಯ ಸಮೀಪ ನಡೆದಿದೆ.ಕರಡಿ ಹಾಗೂ ಕ್ಯಾಪ್ಟನ್ ಹೆಸರಿನ ಎರಡು ಕಾಡಾನೆಗಳು ಸುಮಾರು ಅರ್ಧ ಗಂಟೆಗಳ ಕಾಲ ಕಾದಾಟ ನಡೆಸಿವೆ.

ಸೋಮವಾರ ಮಧ್ಯಾಹ್ನ ಸುಮಾರು 1 ರ ಹೊತ್ತಿಗೆ ಕಾಣಿಸಿಕೊಂಡ ಎರಡು ಕಾಡಾನೆಗಳು ಪರಸ್ಪರ ಕಾದಾಟಕ್ಕೆ ನಿಂತಿತ್ತು.ನಂತರ ಮನೆಯ ಮಾಲೀಕರು ಅರಣ್ಯ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿದ್ದರಿಂದ ತಕ್ಷಣ ಅರಣ್ಯ ಇಲಾಖೆ ಹಾಗೂ ಆನೆ ಕಾರ್ಯ ಪಡೆ ಸಿಬ್ಬಂದಿಗಳು ಆಗಮಿಸಿ ಸಾಹಸ ಪಟ್ಟು ಎರಡು ಕಾಡನೆಗಳ ಕಾದಾಟಕ್ಕೆ ಕಡಿವಾಣ ಹಾಕಿ ಎರಡು ಕಾಡಾನೆಗಳನ್ನು ಬೇರ್ಪಡಿಸಿ ಹಿಮ್ಮೆಟಿಸಿದ್ದಾರೆ.ಕಾಡಾನೆಗಳ ಕಾದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

- Advertisement -

Latest News

error: Content is protected !!