Thursday, June 4, 2026
Homeಕರಾವಳಿಇಂದು ರಂಜಾನ್ ಹಬ್ಬ ಹಿನ್ನೆಲೆ; ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ ಘೋಷಣೆ

ಇಂದು ರಂಜಾನ್ ಹಬ್ಬ ಹಿನ್ನೆಲೆ; ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ ಘೋಷಣೆ

- Advertisement -
- Advertisement -

ಮಂಗಳೂರು: ‌ಇಂದು ರಂಜಾನ್ ಹಬ್ಬ ಹಿನ್ನೆಲೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ ಘೋಷಣೆ‌ ಮಾಡಲಾಗಿದೆ.

ಏ.11ರಂದು ಇದ್ದ ಸಾರ್ವತ್ರಿಕ ರಜೆಯನ್ನು ಏ.10ರಂದು ನೀಡಿ ದ.ಕ. ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

ಕರ್ನಾಟಕ ಸರಕಾರವು 2024ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ದಿನಾಂಕ: 11-04-2024 ರಂದು ರಂಜಾನ್ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿತ್ತು. ಏ. 9 ರಂದು ಚಂದ್ರ ದರ್ಶನವಾಗಿರುವುದರಿಂದ ಎ.11ರ ಬದಲಾಗಿ ದಿನಾಂಕ: ಏ.10 ಬುಧವಾರರಂದು ರಜೆ ಘೋಷಿಸಲು ಇರುವ ಸಾರ್ವಜನಿಕ ಬೇಡಿಕೆಯ ಹಿನ್ನಲೆಯಲ್ಲಿ ರಜೆಯನ್ನು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಏ.10 ಬುಧವಾರ ರಂದು ಸಾರ್ವತ್ರಿಕ ರಜೆಯನ್ನು ಘೋಷಿಸಿ ಆದೇಶಿಸಲಾಗಿದೆ.

- Advertisement -

Latest News

error: Content is protected !!