Wednesday, June 24, 2026
Homeತಾಜಾ ಸುದ್ದಿಮೋದಿ ಗೆಲುವಿಗಾಗಿ 13 ಸಾವಿರ ಅಡಿ ಮೇಲಿಂದ ಸ್ಕೈ ಡೈವಿಂಗ್ ಪ್ರಚಾರ

ಮೋದಿ ಗೆಲುವಿಗಾಗಿ 13 ಸಾವಿರ ಅಡಿ ಮೇಲಿಂದ ಸ್ಕೈ ಡೈವಿಂಗ್ ಪ್ರಚಾರ

- Advertisement -
- Advertisement -

ವಿಜಯಪುರ: ಬಿಜೆಪಿ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ಬಹುಮತದೊಂದಿಗೆ ಗೆಲುವು ಸಾಧಿಸಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ವಿಜಯಪುರ ಜಿಲ್ಲೆಯ ಯುವಕರು ಬ್ಯಾಂಕಾಕ್ ಬಾಹ್ಯಾಕಾಶದಿಂದ ಹಾರಿ ವಿಭಿನ್ನ ಪ್ರಚಾರ ನಡೆಸಿ ಗಮನ ಸೆಳೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯ ಅಪ್ಪಟ ಅಭಿಮಾನಿಗಳಾದ ವಿಜಯಪುರ ಜಿಲ್ಲೆಯ ರಾಜಶೇಖರ ಮುತ್ತಿನಪೆಂಡಿಮಠ ನೇತೃತ್ವದಲ್ಲಿ ಅನುಭವ ಅಗರವಾಲ್, ರಾಹುಲ್ ಡಾಕರೆ, ಹಿಮಾಂಸು ಅರಿದ್ದ ತಂಡ ವಿದೇಶಿ ಬಾಹ್ಯಾಕಾಶ ಖಾವ್ಯಾವ್ ಡ್ರಾಪ್ ಝೋನ್ ನಿಂದ ಬಾಹ್ಯಾಕಾಶದಿಂದ ಹಾರಿ ವಿಭಿನ್ನ ರೀತಿಯಲ್ಲಿ ಗಮನ ಸೆಳೆಯುವ ಪ್ರಚಾರ ಮಾಡಿದ್ದಾರೆ.

ನಮೋ 2.0 ಎಂಬ ಬರಹದ ಬಾವುಟದೊಂದಿಗೆ ಬಾಹ್ಯಾಕಾಶ ಮಾರ್ಗದಿಂದ 13000 ಅಡಿ ಮೇಲಿಂದ ಸ್ಕೈಡೈವಿಂಗ್ ಮಾಡಿರುವ ರಾಜಶೇಖರ ತಂಡ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿದೇಶಿ ಬಾನಲ್ಲಿ ವಿಶೇಷ ಪ್ರಚಾರ ನಡೆಸಿದೆ.

- Advertisement -

Latest News

error: Content is protected !!