Sunday, June 14, 2026
Homeಕರಾವಳಿಬಂಟ್ವಾಳ-ಮೂಡಬಿದಿರೆ ಹೆದ್ದಾರಿಯಲ್ಲಿ ಬೆಂಕಿಗೆ ಆಹುತಿಯಾದ ಡಸ್ಟರ್ ಕಾರು

ಬಂಟ್ವಾಳ-ಮೂಡಬಿದಿರೆ ಹೆದ್ದಾರಿಯಲ್ಲಿ ಬೆಂಕಿಗೆ ಆಹುತಿಯಾದ ಡಸ್ಟರ್ ಕಾರು

- Advertisement -
- Advertisement -

ಬಂಟ್ವಾಳ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಾರು ಬೆಂಕಿಗೆ ಆಹುತಿಯಾದ ಘಟನೆ ಬಂಟ್ವಾಳ ತಾಲೂಕಿನ ರಾಯಿ ಕಂಗಿತ್ತಿಲು ಬಳಿ ಸಂಭವಿಸಿದೆ.

ಬಂಟ್ವಾಳ-ಮೂಡಬಿದಿರೆ ಹೆದ್ದಾರಿಯಲ್ಲಿ ಡಸ್ಟರ್ ಕಾರು ಬಂಟ್ವಾಳದಿಂದ ಮೂಡಬಿದಿರೆಗೆ ತೆರಳುತ್ತಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ.

ಕಾರಿನಲ್ಲಿ ಹೊಗೆ ಕಾಣಿಕೊಳ್ಳುತ್ತಿದ್ದಂತೆಯೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಹೊರಗೆ ಬಂದಿದ್ದು, ಬಾಲಕಿ ಸೇರಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.

- Advertisement -

Latest News

error: Content is protected !!