Sunday, June 14, 2026
Homeಕರಾವಳಿಉಡುಪಿಕಾರ್ಕಳ; 13 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಶಾಲಾ ಮುಖ್ಯೋಪಾಧ್ಯಾಯ ಅಂದರ್

ಕಾರ್ಕಳ; 13 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಶಾಲಾ ಮುಖ್ಯೋಪಾಧ್ಯಾಯ ಅಂದರ್

- Advertisement -
- Advertisement -

ಕಾರ್ಕಳ; 13 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಶಾಲಾ ಮುಖ್ಯೋಪಾಧ್ಯಾಯ ಅಂದರ್ ಆಗಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.ಬೋಳ ಗ್ರಾಮದ ಪಿಲಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರಾಜೇಂದ್ರ ಆಚಾರ್ಯ(58) ಬಂಧಿತ ಆರೋಪಿ.ಕಾರ್ಕಳ ಗ್ರಾಮಾಂತರ ಪೊಲೀಸರು ನಿನ್ನೆ ಆತನನ್ನು ಬಂಧಿಸಿದ್ದಾರೆ.

ರಾಜೇಂದ್ರ ಆಚಾರ್ಯ ಬೋಳ ವಂಜಾರಕಟ್ಟೆ ನಿವಾಸಿ. ಅಲ್ಲದೇ ಇಚ್ಚೋಡಿ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ .ಈತ ಶಾಲೆಯ 13 ಮಕ್ಕಳಿಗೆ 2023ರ ಜೂ.5ರಿಂದ 2024ರ ಎ.3ರ ಮಧ್ಯಾವಧಿಯಲ್ಲಿ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಅಲ್ಲದೆ ವಿದ್ಯಾರ್ಥಿನಿಯೊಬ್ಬಳ ಅಕ್ಕನ ಮೊಬೈಲ್‌ಗೆ ಅಸಭ್ಯ ಫೋಟೊಗಳನ್ನು ಕಳುಹಿಸಿ ತೊಂದರೆ ನೀಡುತ್ತಿದ್ದನು ಎಂದು ದೂರಲಾಗಿದೆ.

ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಯನ್ನು ಪೊಲೀಸರು ಸಂಜೆ ಉಡುಪಿಯ ವಿಶೇಷ ಪೋಕ್ಸೋ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

- Advertisement -

Latest News

error: Content is protected !!