Saturday, June 6, 2026
Homeತಾಜಾ ಸುದ್ದಿಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮಗನ ಗರ್ಲ್‌ಫ್ರೆಂಡ್‌ಗೆ ಕೊರೋನಾ!

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮಗನ ಗರ್ಲ್‌ಫ್ರೆಂಡ್‌ಗೆ ಕೊರೋನಾ!

- Advertisement -
- Advertisement -

ವಾಷಿಂಗ್ಟನ್: ಮಹಾಮಾರಿ ಕೊರೋನಾಗೆ ವಿಶ್ವದ ದೊಡ್ಡಣ್ಣ ಅಮೆರಿಕಾ ಕಂಗಾಲಾಗಿದ್ದು, ಪ್ರತಿದಿನ ಸರಾಸರಿ 40ರಿಂದ 45 ಸಾವಿರ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಈ ನಡುವೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಮಗನ ಗೆಳತಿಗೂ ಕೊರೊನಾವೈರಸ್ ಪಾಸಿಟಿವ್ ದೃಢವಾಗಿದೆ.

ಅಧ್ಯಕ್ಷ ಟ್ರಂಪ್‌ ಅವರ ಹಿರಿಯ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ ಜೊತೆ ಡೇಟಿಂಗ್ ಮಾಡುತ್ತಿರುವ ಕಿಂಬರ್ಲಿ ಗಿಲ್ಫಾಯ್ಲ್, ಅಮೆರಿಕಾ ಅಧ್ಯಕ್ಷರ ಭಾಷಣ ಮತ್ತು ಮೌಂಟ್ ರಶ್ಮೋರ್ನ್‌ನಲ್ಲಿ ಸಂಭ್ರಮಾಚರಣೆ ನೋಡಲು ದಕ್ಷಿಣ ಡಕೋಟಾಗೆ ಪ್ರಯಾಣಿಸಿದ್ದರು.

ಆಕೆಗೆ ಯಾವುದೇ ರೋಗ ಲಕ್ಷಣಗಳಿರಲಿಲ್ಲ, ಪರೀಕ್ಷೆ ನಡೆಸಿದ ಸಮಯದಲ್ಲಿ ಆಕೆಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.

ಮುನ್ನೆಚ್ಚರಿಕೆಯಾಗಿ ಮುಂಬರುವ ಎಲ್ಲಾ ಸಮಾರಂಭಗಳಲ್ಲಿ ಭಾಗಿಯಾವುದನ್ನು ರದ್ದುಗೊಳಿಸಲಾಗಿದೆ. ಡೊನಾಲ್ಡ್ ಟ್ರಂಪ್ ಜೂನಿಯರ್ ಪರೀಕ್ಷಿಸಲಾಗಿದ್ದು, ನೆಗೆಟಿವ್ ವರದಿಯಾಗಿದೆ.

- Advertisement -

Latest News

error: Content is protected !!