Thursday, May 9, 2024
Homeತಾಜಾ ಸುದ್ದಿಐಟಿಯಿಂದ ಕಾಂಗ್ರೆಸ್ ನಂತರ ಕಮ್ಯುನಿಸ್ಟ್‌ ಪಾರ್ಟಿಗೆ ನೋಟಿಸ್; ₹11 ಕೋಟಿ ಬಾಕಿ ಪಾವತಿಸುವಂತೆ ಸೂಚನೆ

ಐಟಿಯಿಂದ ಕಾಂಗ್ರೆಸ್ ನಂತರ ಕಮ್ಯುನಿಸ್ಟ್‌ ಪಾರ್ಟಿಗೆ ನೋಟಿಸ್; ₹11 ಕೋಟಿ ಬಾಕಿ ಪಾವತಿಸುವಂತೆ ಸೂಚನೆ

spot_img
- Advertisement -
- Advertisement -

ಈಗಾಗಲೇ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್ ಪಕ್ಷಕ್ಕೆ ಬಾಕಿ ತೆರಿಗೆ ಪಾವತಿಸುವಂತೆ ನೋಟಿಸ್ ಕಳುಹಿಸಿದ್ದು, ಇದೀಗ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಐಟಿ ಇಲಾಖೆಯಿಂದ ನೋಟಿಸ್ ಸ್ವೀಕರಿಸಿದೆ.

ಕಳೆದ ಕೆಲವು ವರ್ಷಗಳಿಂದ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಹಳೆಯ ಪ್ಯಾನ್ ಕಾರ್ಡ್ ಬಳಸಿದ್ದಕ್ಕಾಗಿ ₹11 ಕೋಟಿ “ಬಾಕಿ” ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ಕೇಳಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.

ಐಟಿ ಇಲಾಖೆಗೆ ಪಾವತಿಸಬೇಕಾದ ಬಾಕಿಯು ಪಕ್ಷದಿಂದ ಹಳೆಯ ಪ್ಯಾನ್ ಕಾರ್ಡ್‌ನ ಬಳಕೆಯಲ್ಲಿನ ವ್ಯತ್ಯಾಸಗಳಿಗಾಗಿ ಅಧಿಕಾರಿಗಳಿಗೆ ಪಾವತಿಸಬೇಕಾದ ದಂಡಗಳು ಮತ್ತು ಬಡ್ಡಿಯನ್ನು ಒಳಗೊಂಡಿವೆ.“ನಾವು ಕಾನೂನು ನೆರವು ಕೋರುತ್ತಿದ್ದೇವೆ; ನಮ್ಮ ವಕೀಲರನ್ನು ಸಂಪರ್ಕಿಸುತ್ತಿದ್ದೇವೆ” ಎಂದು ಹಿರಿಯ ಸಿಪಿಐ ನಾಯಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಈ ಹಿಂದಿನ ವರ್ಷಗಳಲ್ಲಿ ಸಲ್ಲಿಸಿದ ತೆರಿಗೆ ರಿಟರ್ನ್ಸ್‌ನಲ್ಲಿನ ವ್ಯತ್ಯಾಸಗಳಿಗಾಗಿ ₹1,823 ಕೋಟಿಗಿಂತ ಹೆಚ್ಚಿನ ಬಾಕಿಯನ್ನು ಪಾವತಿಸಲು ಪಕ್ಷಕ್ಕೆ ಐಟಿ ನೋಟಿಸ್‌ ನೀಡಿದ್ದು, ತೃಣಮೂಲ ಕಾಂಗ್ರೆಸ್ ನಾಯಕ ಸಾಕೇತ್ ಗೋಖಲೆ ಅವರು ಕಳೆದ 72 ಗಂಟೆಗಳಲ್ಲಿ 11 ಐಟಿ ನೋಟಿಸ್‌ಗಳನ್ನು ಸ್ವೀಕರಿಸಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರವು ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳನ್ನು ಕುಗ್ಗಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!