Wednesday, June 3, 2026
Homeತಾಜಾ ಸುದ್ದಿವಿಜಯೇಂದ್ರ ವಿರುದ್ಧ ಈಶ್ವರಪ್ಪ ವಾಗ್ದಾಳಿ..!; ವಿಜಯೇಂದ್ರ ರಾಜೀನಾಮೆ ಕೊಡೋ ದಿನ ಹತ್ತಿರ ಬರ್ತಿದೆ

ವಿಜಯೇಂದ್ರ ವಿರುದ್ಧ ಈಶ್ವರಪ್ಪ ವಾಗ್ದಾಳಿ..!; ವಿಜಯೇಂದ್ರ ರಾಜೀನಾಮೆ ಕೊಡೋ ದಿನ ಹತ್ತಿರ ಬರ್ತಿದೆ

- Advertisement -
- Advertisement -

ಶಿವಮೊಗ್ಗ: ಬಿಜೆಪಿಯ ವಶಿಷ್ಠರ ವಿರುದ್ಧ ಬಂಡೆದ್ದಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಬಿ.ವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದು, ವಿಜಯೇಂದ್ರ ರಾಜೀನಾಮೆ ಕೊಡೋ ದಿನ ಹತ್ತಿರ ಬರ್ತಿದೆ ಎಂದು ಗುಡುಗಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಆರು ತಿಂಗಳು ಖಾಲಿ ಉಳಿಸಿಕೊಂಡು, ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಸಿ.ಟಿ ರವಿ ಹೆಸರುಗಳನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಚಿಸದೆ, ದೆಹಲಿಗೆ ಹೋಗಿ ತಮ್ಮ ಮಗನಿಗೆ ಅದನ್ನು ಕೊಡಿಸಿರುವ ಬಗ್ಗೆ ಕಾರ್ಯಕರ್ತರಲ್ಲಿ ಅಸಮಾಧಾನ ಮತ್ತು ನೋವಿದೆ ಎಂದು ಹೇಳಿದ್ದಾರೆ.

ಇನ್ನು ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುವ ತನಗಾದರೂ ರಾಜ್ಯಾಧ್ಯಕ್ಷನ ಸ್ಥಾನ ನೀಡಬೇಕಿತ್ತು. ಬಿಜೆಪಿ ಕಟ್ಟಾಳು ಮತ್ತು ಹಿಂದೂತ್ವವನ್ನು ಬಲವಾಗಿ ಪ್ರತಿಪಾದಿಸುವ ನಾನು ಈ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿ.ವೈ. ರಾಘವೇಂದ್ರರನ್ನು  ಸೋಲಿಸುವುದು, ಅವರ ಸಹೋದರ ಬಿ.ವೈ ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವುದು ಮತ್ತು ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿರುವ ಬಿ.ಎಸ್ ಯಡಿಯೂರಪ್ಪರಿಗೆ ಪಾಠ ಕಲಿಸುವೆ ಎಂದು ಅಬ್ಬರಿಸಿದರು.

ಚುನಾವಣೆಯಲ್ಲಿ ಗೆದ್ದ ಬಳಿಕ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು ಎಂದು ಮೊದಲು ಕೈಯೆತ್ತುವವನು ತಾನೇ ಎಂದು ಈಶ್ವರಪ್ಪ ಹೇಳಿದರು.

- Advertisement -

Latest News

error: Content is protected !!