Monday, June 8, 2026
Homeಅಪರಾಧಕೊರಗಜ್ಜ ದೈವದ ಪೂಜೆ ತಗಾದೆ; ದೂರು, ಪ್ರತಿದೂರು

ಕೊರಗಜ್ಜ ದೈವದ ಪೂಜೆ ತಗಾದೆ; ದೂರು, ಪ್ರತಿದೂರು

- Advertisement -
- Advertisement -

ಪಡುಬಿದ್ರಿ: ಕೊರಗಜ್ಜ ದೈವದ ಪೂಜಾ ವಿಚಾರದಲ್ಲಿ ಹೆಜಮಾಡಿ ಗ್ರಾಮದ ಜಾಮದಾರ್ ತೋಟ ಎಂಬಲ್ಲಿ ಶಿವರಾತ್ರಿಯಂದು ಕುಟುಂಬಿಕರ ನಡುವೆಯೇ ತೀವ್ರ ತಗಾದೆ ಉಂಟಾಗಿ ಹಲ್ಲೆ ನಡೆದ ಘಟನೆ ವರದಿಯಾಗಿದೆ.

ದೈವದ ಪೂಜೆ ವಿಚಾರದ ತಗಾದೆಯಿಂದಾಗಿ ಕತ್ತಿಯಿಂದ ಏಕನಾಥ ಅವರು ಶಿವರಾತ್ರಿಯಂದು ದೈವದ ಪೂಜೆಯ ಸಂದರ್ಭ ನೈವೇದ್ಯ ಇಡುತ್ತಿದ್ದ ದೀನನಾಥ ಅವರ ಮೇಲೆ ಹಲ್ಲೆ ನಡೆಸಿದ್ದು, ತಲೆಗೆ ತೀವ್ರ ತರಹದ ಗಾಯಗಳಾಗಿ ಮೂಲ್ಕಿಯ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದೇ ವೇಳೆ ಹೆಜಮಾಡಿ ಟೋಲ್ ಬಳಿಯ ನಿವಾಸಿ ಏಕನಾಥ ಸ್ವಾಮಿ, ಶಿವರಾತ್ರಿಯಂದು ಕೊರಗಜ್ಜನ ಗುಡಿಯಲ್ಲಿ ಪೂಜಾ ನಿರತರಾಗಿದ್ದಾಗ ಆರೋಪಿಗಳಾದ ದೀನನಾಥ ಹಾಗೂ ಅಕ್ಷಯ ಭಂಡಾರಿ ಅವರು ಮರದ ರೀಪು ಹಾಗೂ ತೆಂಗಿನ ಹಿಡಿಯಿಂದ ಹಲ್ಲೆ ನಡೆಸಿದ್ದು ಮೈ, ಕೈ, ಭುಜ, ಬೆನ್ನು ಕಾಲುಗಳಿಗೆ ಗಾಯಗಳಾಗಿ ಪಡುಬಿದ್ರಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಬಗ್ಗೆ ಪ್ರತಿದೂರನ್ನೂ ಶಿವರಾತ್ರಿಯಂದೇ ತಡರಾತ್ರಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.

- Advertisement -

Latest News

error: Content is protected !!