Wednesday, June 3, 2026
Homeತಾಜಾ ಸುದ್ದಿಹಲ್ಲೆ ಮಾಡಿ ಫೋನ್ ಕಸಿದುಕೊಂಡ ನಟಿ ಲಕ್ಷ್ಮೀ; ಪೊಲೀಸರಿಗೆ ದೂರು

ಹಲ್ಲೆ ಮಾಡಿ ಫೋನ್ ಕಸಿದುಕೊಂಡ ನಟಿ ಲಕ್ಷ್ಮೀ; ಪೊಲೀಸರಿಗೆ ದೂರು

- Advertisement -
- Advertisement -

ಬೆಂಗಳೂರು: ಕಿರುತೆರೆ ನಟಿ ಲಕ್ಷ್ಮೀ ಸಿದ್ದಯ್ಯ ರಸ್ತೆ ಅಪಘಾತ ಎಸಗಿ, ಮೊಬೈಲ್ ಕಸಿದುಕೊಂಡಿದ್ದಾರೆ ಎಂದು ಆರೋಪಿಸಿ ಸಹೋದರಿಯರಿಬ್ಬರು ಜ್ಞಾನಭಾರತಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ವರ್ಷ ಡಿಸೆಂಬರ್ 6ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಜ್ಞಾನಭಾರತಿ ಮೆಟ್ರೋ ಸಮೀಪ ದೂರುದಾರ ಮಾಧುರಿ ಆಕೆಯ ಸಹೋದರಿ ಐಶ್ವರ್ಯಾ ಜತೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಅದೇ ಮಾರ್ಗದಲ್ಲಿ ಕಾರಿನಲ್ಲಿ ಬಂದ ಲಕ್ಷ್ಮೀ ಸಿದ್ದಯ್ಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಆಗ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಈ ವೇಳೆ ಲಕ್ಷ್ಮೀ ಸಿದ್ದಯ್ಯ ಮತ್ತು ಅವರ ಜತೆಗಿದ್ದ ಆನಂದ್‌ಕುಮಾರ್ ಎಂಬಾತ ನಮ್ಮ ಮೇಲೆ ಹಲ್ಲೆ ನಡೆಸಿ ಗಲಾಟೆಯನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದ ಮೊಬೈಲ್ ಕಸಿದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ನಟಿ ಲಕ್ಷ್ಮೀ ಸಿದ್ದಯ್ಯ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ.

ಆದರೆ, ಯಾವ ಮೊಬೈಲ್ ಕಸಿದುಕೊಂಡಿಲ್ಲ. ಹಲ್ಲೆಯೂ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮತ್ತೂಂದೆಡೆ ತಾಂತ್ರಿಕವಾಗಿಯೂ ಮೊಬೈಲ್ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು. ಇದೀಗ ಘಟನೆ ಕುರಿತು ಮಾಧ್ಯಮಗಳ ಮುಂದೆ ಬಂದಿರುವ ಸಹೋದರಿಯರು, ಘಟನೆಯಲ್ಲಿ ಲಕ್ಷ್ಮೀ ಸಿದ್ದಯ್ಯ ಅವರನ್ನು ಪೊಲೀಸರು ಠಾಣೆಗೆ ಕರೆಸಿಲ್ಲ. ವಿಚಾರಣೆ ನಡೆಸಿಲ್ಲ. ಮೊಬೈಲ್ ಪತ್ತೆ ಕಾರ್ಯವನ್ನು ನಡೆಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಅದಕ್ಕೆ ಮಾಧ್ಯಮಗಳ ಮೂಲಕ ಪ್ರತಿಕ್ರಿಯೆ ನೀಡಿರುವ ನಟಿ ಲಕ್ಷ್ಮೀ, ಘಟನೆ ವೇಳೆ ನಾನು ಯಾರ ಮೇಲೂ ಹಲ್ಲೆ ನಡೆಸಿಲ್ಲ. ಸಹೋದರಿಯರ ಅಣ್ಣ ಮತ್ತು ತಾಯಿ ಸ್ಥಳಕ್ಕೆ ಬಂದು ಅವರೇ ಗಲಾಟೆ ಮಾಡಿದ್ದಾರೆ. ಕೋರ್ಟ್ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!