Saturday, June 13, 2026
Homeತಾಜಾ ಸುದ್ದಿಪಾಕಿಸ್ತಾನ: ಕ್ರಾಸಿಂಗ್ ವೇಳೆ ಬಸ್‌ಗೆ ಡಿಕ್ಕಿ ಹೊಡೆದ ರೈಲು, 29 ಸಿಖ್ ಯಾತ್ರಿಗಳು ಸಾವು

ಪಾಕಿಸ್ತಾನ: ಕ್ರಾಸಿಂಗ್ ವೇಳೆ ಬಸ್‌ಗೆ ಡಿಕ್ಕಿ ಹೊಡೆದ ರೈಲು, 29 ಸಿಖ್ ಯಾತ್ರಿಗಳು ಸಾವು

- Advertisement -
- Advertisement -

ಇಸ್ಲಾಮಬಾದ್: ಕ್ರಾಸಿಂಗ್ ವೇಳೆ ಬಸ್‌ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ 19 ಜನರು ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಶೇಖ್‌ಪುರದಲ್ಲಿ ಇಂದು ನಡೆದಿದೆ.

ಫಾರೂಖಾಬಾದ್ ನ ಮಾನವರಹಿತ ರೈಲ್ವೆ ಕ್ರಾಸ್‌ನಲ್ಲಿ ಈ ದುರಂತ ಸಂಭವಿಸಿದ್ದು, ಕರಾಚಿಯಿಂದ ಲಾಹೋರ್ ಗೆ ತೆರಳುತ್ತಿದ್ದ ಶಾಹ್ ಹುಸ್ಸೇನ್ ಎಕ್ಸ್‌ಪ್ರೆಸ್ ರೈಲು, ಸಿಖ್ ಯಾತ್ರಿಕರು ಪ್ರಯಾಣಿಸುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದಲ್ಲಿ ಕನಿಷ್ಠ 29 ಮಂದಿ ಮೃತಪಟ್ಟಿದ್ದು, ಬಹುತೇಕರು ಪಾಕಿಸ್ತಾನದ ಸಿಖ್ ಯಾತ್ರಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.
ಎಲ್ಲ ಯಾತ್ರಿಕರು ಪೇಶಾವರದಿಂದ ಲಾಹೋರ್‌ಗೆ ತೆರಳುತ್ತಿದ್ದರು. ಸುಮಾರು 27 ಮಂದಿ ಈ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. 19 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 8 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!