Sunday, October 25, 2026
Homeಕರಾವಳಿಬೆಳ್ತಂಗಡಿ; ಉಜಿರೆಯ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ; ಪೊಲೀಸರಿಂದ ದಾಳಿ, ಆರೋಪಿಗಳ ಬಂಧನ

ಬೆಳ್ತಂಗಡಿ; ಉಜಿರೆಯ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ; ಪೊಲೀಸರಿಂದ ದಾಳಿ, ಆರೋಪಿಗಳ ಬಂಧನ

- Advertisement -
- Advertisement -

ಬೆಳ್ತಂಗಡಿ; ಉಜಿರೆಯ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ನಿನ್ನೆ (ಮಾರ್ಚ್ 6) ರಂದು ನಡೆದಿದೆ.

ಉಜಿರೆಯ ಹಳೆ ಪೇಟೆ ಎಂಬಲ್ಲಿರುವ  ಸುರೇಶ್ ಬೋರ್ಡಿಂಗ್ & ಲಾಡ್ಜಿಂಗ್ / ಐಶ್ವರ್ಯಾ ಲಾಡ್ಜಿಂಗ್ & ಬೋರ್ಡಿಂಗ್ ನಲ್ಲಿ   ವೇಶ್ಯಾವಾಟಿಕೆ‌ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪೊಲೀಸ್ ನಿರೀಕ್ಷಕರಾದ  ಬಿ.ಜಿ.ಸುಬ್ಬಾಪೂರ ಮಠ್ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ಈ ವೇಳೆ  ವೇಶ್ಯಾವಾಟಿಕೆ‌ ನಿರತರಾಗಿದ್ದ ಆರೋಪಿಗಳಾದ ರೇಣುಕಾ ಪ್ರಸಾದ್ (29), ಬದ್ನಾಳ್ ಕಂಪೌಂಡ್, ಅರಳೇ ಪೇಟೆ, ತುಮಕೂರು,  ರಾಜೇಶ್ ಮೋಹನ್  ನಾಯರ್ (34), ನಿಟ್ಟೆ ಗ್ರಾಮ, ಕಾರ್ಕಳ,  ನಿತಿನ್ ಕುಮಾರ್ (28),  ನೂರಾಲ್ ಬೆಟ್ಟು  ಗ್ರಾಮ ಕಾರ್ಕಳ  ಎಂಬವರುಗಳನ್ನು  ವಶಕ್ಕೆ ಪಡೆದುಕೊಂಡು, ಸ್ಥಳದಲ್ಲಿದ್ದ ನೊಂದ ಯುವತಿಯನ್ನು  ರಕ್ಷಿಸಿದ್ದಾರೆ. ಆರೋಪಿಗಳ ವಿರುದ್ಧ ಹಾಗೂ ದಾಳಿಯ ವೇಳೆ ಪರಾರಿಯಾದ ಆರೋಪಿಗಳ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ:  30/24 ಕಲಂ:3,4,5,5 (d) ITP ACT ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!