Friday, June 5, 2026
Homeಕರಾವಳಿಮಂಗಳೂರು: ಬಸ್ ನಲ್ಲಿ ಮರೆತು ಹೋಗಿದ್ದ ಚಿನ್ನಾಭರಣ ಹಿಂತಿರುಗಿಸಿದ ಖಾಸಗಿ ಬಸ್ ನಿರ್ವಾಹಕ

ಮಂಗಳೂರು: ಬಸ್ ನಲ್ಲಿ ಮರೆತು ಹೋಗಿದ್ದ ಚಿನ್ನಾಭರಣ ಹಿಂತಿರುಗಿಸಿದ ಖಾಸಗಿ ಬಸ್ ನಿರ್ವಾಹಕ

- Advertisement -
- Advertisement -

ಮಂಗಳೂರು: ಬಸ್ ನಲ್ಲಿ ಬಿಟ್ಟು ಹೋಗಿದ್ದ ಒಡವೆಗಳನ್ನು ವಾರೀಸುದಾರರಿಗೆ ಹಿಂತಿರುಗಿಸಿ ಖಾಸಗಿ ಬಸ್ ಚಾಲಕರೋರ್ವರು ಪ್ರಾಮಾಣಿಕತೆ ಮೆರೆದಿದ್ದಾರೆ.

ನವದುರ್ಗ ಬಸ್ ನಿರ್ವಾಹಕ ಸಂತೋಷ ಶೆಟ್ಟಿ ಬಸ್ ನಲ್ಲಿ ಬಿಟ್ಟು ಹೋಗಿದ್ದ ಆರು ಪವನ್ ಗೂ ಹೆಚ್ಚಿನ ಚಿನ್ನಾಭರಣಗಳನ್ನು ವಾಪಸ್ ಮಾಡಿದ್ದಾರೆ.

ಒಡವೆ ಮರೆತು ಹೋಗಿದ್ದ ಪ್ರಯಾಣಿಕರನ್ನು ಹುಡುಕಿ ಒಡವೆಗಳ‌ನ್ನು ಹಸ್ತಾಂತರಿಸಿ ಸ್ಟೇಟ್ ಬ್ಯಾಂಕ್ – ಕಟೀಲು- ಕಿನ್ನಿಗೋಳಿ ಮಾರ್ಗ ಮಧ್ಯೆ ಸಂಚರಿಸುವ ನವದುರ್ಗ ಬಸ್ ನಿರ್ವಾಹಕ ಸಂತೋಷ್ ಶೆಟ್ಟಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಸಂತೋಷ್ ಶೆಟ್ಟಿ ಪ್ರಾಮಾಣಿಕತೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -

Latest News

error: Content is protected !!