Saturday, June 6, 2026
Homeಕರಾವಳಿಉಳ್ಳಾಲ: ನಶೆಯಲ್ಲಿ ಜೀಪ್ ಚಾಲನೆ; ಬೈಕ್ ಸವಾರ ಸಾವು

ಉಳ್ಳಾಲ: ನಶೆಯಲ್ಲಿ ಜೀಪ್ ಚಾಲನೆ; ಬೈಕ್ ಸವಾರ ಸಾವು

- Advertisement -
- Advertisement -

ಮಂಗಳೂರು: ಜೀಪ್ ಚಾಲಕನ ಅಜಾಗರೂಕತೆಯ ಚಾಲನೆಗೆ ಬೈಕ್ ಸವಾರ ಬಲಿಯಾದ ಘಟನೆ ಉಳ್ಳಾಲ ತಾಲೂಕಿನ ಕೊಲ್ಯದಲ್ಲಿ ಸಂಭವಿಸಿದೆ.

ಕೊಲ್ಯ ನಿವಾಸಿ ಸಂತೋಷ್ ಬೆಳ್ಚಡ (45) ಮೃತ ಬೈಕ್ ಸವಾರನಾಗಿದ್ದು, ಕೊಲ್ಯದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ ನಡೆದಿದೆ.

ಥಾರ್ ಜೀಪ್ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಚಕ್ರ ಸಿಡಿದು ಕಾರು ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದಿದೆ.

ಈ ವೇಳೆ ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು, ಸವಾರ ಸಂತೋಷ್ ತಲೆ ಡಿವೈಡರ್ ಗೆ ತಾಗಿ ಗಂಭಿರ ಗಾಯಗೊಂಡು ಸಾವನ್ನಪ್ಪಿದ್ದಾರೆ.

ಮೃತ ಸಂತೋಷ್ ಬಾಳೆ ಹಣ್ಣು ವ್ಯಾಪಾರಿಯಾಗಿದ್ದು, ಜೀಪ್ ಚಾಲಕ ನಶೆಯಲ್ಲಿದ್ದ ಎಂಬ ಆರೋಪ ವ್ಯಕ್ತವಾಗಿದೆ.

ಅಪಘಾತ ಸಂಭವಿಸಿದ ಬಳಿಕ ಸ್ಥಳೀಯರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದು, ಜೀಪ್ ನಲ್ಲಿದ್ದ ಮೂವರ ಬಂಧನಕ್ಕೆ ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!