Friday, June 5, 2026
Homeಕರಾವಳಿಮಂಗಳೂರು: ಪಿಎಚ್ ಡಿ ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್; ಸುರತ್ಕಲ್ ಬಳಿ ಯುವತಿಯ ಸ್ಕೂಟರ್ ಪತ್ತೆ

ಮಂಗಳೂರು: ಪಿಎಚ್ ಡಿ ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್; ಸುರತ್ಕಲ್ ಬಳಿ ಯುವತಿಯ ಸ್ಕೂಟರ್ ಪತ್ತೆ

- Advertisement -
- Advertisement -

ಮಂಗಳೂರಿನಲ್ಲಿ ಪಿಎಚ್ ಡಿ ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸುರತ್ಕಲ್ ಬಳಿ ಯುವತಿಯ ಸ್ಕೂಟರ್ ಪತ್ತೆಯಾಗಿದ್ದು, ಸ್ಕೂಟರ್ ವಶಕ್ಕೆ ಪಡೆದ ಉಳ್ಳಾಲ ಪೊಲೀಸರು ಚೈತ್ರಾಳ ಪತ್ತೆ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.


ಪಿಎಚ್ ಡಿ ವಿದ್ಯಾರ್ಥಿನಿಯಾಗಿರುವ ಈಕೆ ಮಂಗಳೂರಿನ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಈ ನಡುವೆ ಫೆಬ್ರವರಿ 17 ರಂದು ಬೆಳಗ್ಗೆ 9 ಗಂಟೆಗೆ ಪಿಜಿಯಿಂದ ತನ್ನ ಸ್ಕೂಟರಲ್ಲಿ ತೆರಳಿದ್ದ ಈಕೆಯ ಮೊಬೈಲ್ ಪಂಪ್ ವೆಲ್ ಬಳಿ ಸ್ವಿಚ್ಡ್ ಆಫ್ ಆಗಿತ್ತು. ಸುರತ್ಕಲ್ ಬಳಿಯ ಎಟಿಎಂನಲ್ಲೂ ಹಣ ಡ್ರಾ ಮಾಡಿದ್ದಳು ಎನ್ನಲಾಗಿದೆ.


ಸದ್ಯ, ಚೈತ್ರಾ ಕೇರಳ ಅಥವಾ ಬೆಂಗಳೂರು ಕಡೆ ಇರುವ ಅನುಮಾನ ವ್ಯಕ್ತವಾಗಿದೆ. ಅನ್ಯಕೋಮಿನ ಯುವಕನ ಜೊತೆ ಚೈತ್ರಾ ತೆರಳಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಹಿಂದೂ ಪರ ಸಂಘಟನೆಗಳು ಇದೊಂದು ಲವ್ ಜಿಹಾದ್ ಪ್ರಕರಣ ಎಂದು ಆರೋಪಿಸಿವೆ. ಈ ಬಗ್ಗೆ ಮಾತನಾಡಿದ ಭಜರಂಗದಳ ಕರ್ನಾಟಕ ಪ್ರಾಂತ ಸಹಸಂಚಾಲಕ ಮುರಳೀಕೃಷ್ಣ ಹಸಂತಡ್ಕ, ಚೈತ್ರಾ ಹೆಬ್ಬಾರ್ ನಾಪತ್ತೆ ಕೇಸನ್ನು ಸರ್ಕಾರ ಮತ್ತು ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಸುಸಂಸ್ಕೃತ ಮನೆಯ ಹುಡುಗಿಯನ್ನ ಬ್ಲ್ಯಾಕ್ ಮೇಲ್ ಹಾಗೂ ವಂಚಿಸಿ ಅಪಹರಣ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

- Advertisement -

Latest News

error: Content is protected !!