Thursday, June 4, 2026
Homeಕರಾವಳಿಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಬಂಟ್ವಾಳ ಮೂಲ‌ದ ಅನಿಲ್ ಸಾಧನೆ

ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಬಂಟ್ವಾಳ ಮೂಲ‌ದ ಅನಿಲ್ ಸಾಧನೆ

- Advertisement -
- Advertisement -

ಮಂಗಳೂರು: ಕರ್ನಾಟಕ ಸಿವಿಲ್ ನ್ಯಾಯಾಧೀಶರ ಪರೀಕ್ಷೆ ಫಲಿತಾಂಶವು ಶುಕ್ರವಾರದಂದು ಪ್ರಕಟಗೊಂಡಿದ್ದು, ಪರೀಕ್ಷೆಯಲ್ಲಿ ಬಂಟ್ವಾಳದ ಕೃಷಿಕ ದಂಪತಿ ಪುತ್ರ ಅನಿಲ್ ಜಾನ್ ಸಿಕ್ವೆರಾ (25) ಉತ್ತೀರ್ಣರಾಗಿದ್ದಾರೆ.

ವಕೀಲರ ಸಂಘದ ಕಾರ್ಯದರ್ಶಿ ಶ್ರೀಧರ್ ಎಣ್ಮಕಜೆ ಈ ಕುರಿತು ಪ್ರತಿಕ್ರಯಿಸಿ, ‘ಪ್ರಿಲಿಮಿನರಿ, ಮೇನ್ ಮತ್ತು ಸಂದರ್ಶನದಲ್ಲಿ ಉತ್ತೀರ್ಣರಾಗುವ ಮೂಲಕ ಅನಿಲ್ ಇತರರಿಗೆ ಸ್ಫೂರ್ತಿಯಾಗಿದ್ದಾರೆ. ರಾಜ್ಯದಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ನ್ಯಾಯಾಧೀಶ ಪರೀಕ್ಷೆ ಪಾಸು ಮಾಡಿದವರಾಗಿದ್ದಾರೆ’ ಎಂದು ತಿಳಿಸಿದರು.

ಇಲ್ಲಿನ ವಕೀಲರ ಸಂಘದ ಸದಸ್ಯೆ ಗೀತಾ ಕೂಡ ಸಿವಿಲ್ ನ್ಯಾಯಾಧೀಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 33 ಜನರು ಸಿವಿಲ್ ನ್ಯಾಯಾಧೀಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

- Advertisement -

Latest News

error: Content is protected !!