Thursday, June 4, 2026
Homeಕರಾವಳಿಮಂಗಳೂರುಉಪ್ಪಿನಂಗಡಿ; ರಾತ್ರಿ ಓದಿ ಮಲಗಿದ್ದ ವಿದ್ಯಾರ್ಥಿನಿ ನಿದ್ದೆಯಲ್ಲೇ ಹೃದಯಾಘಾತಕ್ಕೆ ಬಲಿ

ಉಪ್ಪಿನಂಗಡಿ; ರಾತ್ರಿ ಓದಿ ಮಲಗಿದ್ದ ವಿದ್ಯಾರ್ಥಿನಿ ನಿದ್ದೆಯಲ್ಲೇ ಹೃದಯಾಘಾತಕ್ಕೆ ಬಲಿ

- Advertisement -
- Advertisement -

ಉಪ್ಪಿನಂಗಡಿ; ಮಧ್ಯರಾತ್ರಿವರೆಗೂ ಓದಿ ಮಲಗಿದ್ದ ವಿದ್ಯಾರ್ಥಿನಿ ನಿದ್ದೆಯಲ್ಲೇ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿ ಗ್ರಾಮದ ಕರ್ವೇಲು ಬಳಿ ನಡೆದಿದೆ.ಇಲ್ಲಿನ ಉದ್ಯಮಿ ದಾವೂದ್ ಅವರ ಪುತ್ರಿ ಹಫೀಝಾ (17) ಮೃತ ವಿದ್ಯಾರ್ಥಿನಿ.

ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಹಫೀಝಾ ಓದುತ್ತಿದ್ದಳು. ಬುಧವಾರ ತಡರಾತ್ರಿವರೆಗೆ ಓದಿಕೊಂಡಿದ್ದ  ಆಕೆ ಬಳಿಕ ಮಲಗಲು ಹೋಗಿದ್ದಾಳೆ . ಗುರುವಾರ ಬೆಳಗ್ಗೆ ಎದ್ದೇಳದೇ ಇರುವುದನ್ನು ಕಂಡು ಮನೆಯವರು ಎಬ್ಬಿಸಲು ಹೋದಾಗ ಹಫೀಝಾ ಇಹಲೋಕ ತ್ಯಜಿಸಿದ್ದಳು. ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲೇ ಜನ ಹೃದಯಾಘಾತಕ್ಕೆ ತುತ್ತಾಗುತ್ತಿರೋದು ಆತಂಕ ಮೂಡಿಸಿದೆ.

- Advertisement -

Latest News

error: Content is protected !!