Friday, June 5, 2026
Homeಕರಾವಳಿಮಂಗಳೂರು; ದೂರು ನೀಡಲು ಬಂದ ಮಹಿಳೆಗೆ ಕಿರುಕುಳ ಆರೋಪ; ಕಾವೂರು ಠಾಣೆ ಹೆಡ್‌ ಕಾನ್‌ಸ್ಟೇಬಲ್‌ ಅಮಾನತು

ಮಂಗಳೂರು; ದೂರು ನೀಡಲು ಬಂದ ಮಹಿಳೆಗೆ ಕಿರುಕುಳ ಆರೋಪ; ಕಾವೂರು ಠಾಣೆ ಹೆಡ್‌ ಕಾನ್‌ಸ್ಟೇಬಲ್‌ ಅಮಾನತು

- Advertisement -
- Advertisement -

ಮಂಗಳೂರು; ದೂರು ನೀಡಲು ಬಂದ ಮಹಿಳೆಗೆ ಕಿರುಕುಳ ಆರೋಪ ಹಿನ್ನೆಲೆ ಕಾವೂರು ಠಾಣೆ ಹೆಡ್‌ ಕಾನ್‌ಸ್ಟೇಬಲ್‌ ಸಂತೋಷ್ ಅವರನ್ನು ಅಮಾನತುಗೊಳಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಠಾಣೆಗೆ ದೂರು ನೀಡಲು ತೆರಳಿದ್ದ ವೇಳೆ ಮಹಿಳೆ ನಂಬರ್‌ ಪಡೆದ ಸಂತೋಷ್‌ ಆಕೆಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡಿದ್ದ ಜೊತೆಗೆ ದೂರು ನೀಡಿದರೆ ಜೀವನ ಪರ್ಯಂತ ಕೊರಗುವಂತೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ನೊಂದ ಮಹಿಳೆ ಮಂಗಳೂರು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ಅವರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಂತೋಷ್ ಅವರನ್ನು ಅಮಾನತು ಗೊಳಿಸಿ ತನಿಖೆ ನಡೆಸಲು ಕಮಿಷನರ್ ಆದೇಶಿಸಿದ್ದಾರೆ.

- Advertisement -

Latest News

error: Content is protected !!