Wednesday, June 3, 2026
Homeಕರಾವಳಿಪುತ್ತೂರಿನ ಬಸ್ ನಿಲ್ದಾಣದ ಬಳಿ ಎರಡು ತಂಡಗಳ ನಡುವೆ ಹೊಡೆದಾಟ

ಪುತ್ತೂರಿನ ಬಸ್ ನಿಲ್ದಾಣದ ಬಳಿ ಎರಡು ತಂಡಗಳ ನಡುವೆ ಹೊಡೆದಾಟ

- Advertisement -
- Advertisement -

ಪುತ್ತೂರು: ಇಲ್ಲಿನ ಬಸ್ ನಿಲ್ಧಾಣದ ಬಳಿಯಲ್ಲಿ ನಡು ರಸ್ತಯಲ್ಲಿಯೇ ರಾತ್ರಿ ಹೊತ್ತು ಎರಡು ತಂಡಗಳ ನಡುವೆ ನಡುರಸ್ತೆಯಲ್ಲೇ ಹೊಡೆದಾಟ ನಡೆದ ಘಟನೆ ನಡೆದಿದೆ.

ಪುತ್ತೂರು ಬಸ್ ನಿಲ್ದಾಣ ಸಮೀಪದ ಗಾಂಧಿಕಟ್ಟೆ ಸಮೀಪ ರಾತ್ರಿ 8.45 ಸಮಯಕ್ಕೆ ಹಣ್ಣು ಹಂಪಲು ವಿತರಣೆಯ ಪಿಕಪ್ ವಾಹನದವರು ಮತ್ತು ಮಾರುತಿ 800 ಕಾರಿನ ನಡುವೆ ಮುಖ್ಯ ಪೇಟೆಯಲ್ಲೇ ನಡುರಸ್ತೆಯಲ್ಲೇ ಹೊಡೆದಾಟ ನಡೆದಿದೆ. ಇನ್ನು ಈ ಗಲಾಟೆಯು ಯಾವ ಕಾರಣಕ್ಕೆ ನಡೆದಿದೆ ಎನ್ನುವ ಮಾಹಿತಿ ತಿಳಿದಿಲ್ಲ.

ಇನ್ನು ಈ ಘಟನೆಯ ಕುರಿತು ವಿಡಿಯೋ ವೈರಲ್ ಆಗಿದ್ದು, ಎರಡೂ ಬಣಗಳು ಒಂದೇ ಕೋಮಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ. ಗುಂಪಿನ ಹೊಡೆದಾಟ ನಡುರಸ್ತೆಯವರೆಗೂ ತಲುಪಿದಾಗ ಸ್ವಲ್ಪ ಹೊತ್ತು ಟ್ರಾಫಿಕ್ ಜಾಮ್ ಆಗಿದೆ. ಹೊಡೆದಟ ಅತಿರೇಖಕ್ಕೆ ತಲುಪಿದಾಗ ಸ್ಥಳೀಯ ಅಂಗಡಿಯವರು ಬಂದು ಎಚ್ಚರಿಕೆ ಕೊಟ್ಟಿದ್ದು, ನಂತರ ಎರಡು ಗುಂಪುಗಳು ಜಾಗ ಖಾಲಿ ಮಾಡಿದೆ.

- Advertisement -

Latest News

error: Content is protected !!