Thursday, July 23, 2026
Homeಕರಾವಳಿಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿ ಸುಬ್ರಪುರ ಮಠ್ ಅಧಿಕಾರ ಸ್ವೀಕಾರ

ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿ ಸುಬ್ರಪುರ ಮಠ್ ಅಧಿಕಾರ ಸ್ವೀಕಾರ

- Advertisement -
- Advertisement -

ಬೆಳ್ತಂಗಡಿ : ಖಾಲಿ ಇದ್ದ ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸ್ಥಾನಕ್ಕೆ ಬಸಲಿಂಗಯ್ಯ ಜಿ ಸುಬ್ರಪುರ ಮಠ್ ಅವರನ್ನು ಪೊಲೀಸ್ ಇಲಾಖೆ ನೇಮಕ ಮಾಡಿದ್ದು. ಫೆ.1 ರಂದು ಸಂಜೆ ಅಧಿಕಾರ ಸ್ವೀಕರಿಸಿಕೊಂಡರು.

ಈವರೆಗೂ ಬೆಳ್ತಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ನಾಗೇಶ್ ಕದ್ರಿ ಪ್ರಭಾರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದೀಗ 2011ನೇ ಸಾಲಿನಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿ ಮುಂಬಡ್ತಿ ಹೊಂದಿ, ಬೆಳಗಾವಿ ಜಿಲ್ಲೆಯ ವಿವಿಧ ಕಡೆ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಸದ್ರಿ ಬೆಂಗಳೂರು ಸಿ.ಐ.ಡಿ ಇನ್ಸ್ ಪೆಕ್ಟರ್ ಆಗಿ ವರ್ಗಾವಣೆ ಆದೇಶದಲ್ಲಿದ್ದ ಬಸವಲಿಂಗಯ್ಯ ಸುಬ್ಬಾಪುರಮಠರವರು ಬೆಳ್ತಂಗಡಿ ಪೊಲೀಸ್ ನಿರೀಕ್ಷಕರಾಗಿ ನಿಯುಕ್ತಿಗೊಂಡರು. ಇವರು ಪಶ್ಚಿಮ ವಲಯ ಐಜಿಪಿ ಮತ್ತು ಮಂಗಳೂರು ಪೋಲಿಸ್ ಅಧೀಕ್ಷಕರನ್ನು ಭೇಟಿಯಾಗಿ ನಾಗೇಶ್ ಕದ್ರಿಯವರಿಂದ ಬೆಳ್ತಂಗಡಿ ಠಾಣೆಯಲ್ಲಿ ಅಧಿಕಾರ ವಹಿಸಿಕೊಂಡರು.

ಬೆಳ್ತಂಗಡಿ ಪೋಲಿಸ್ ಠಾಣೆಯು ಮೇಲ್ದರ್ಜೆಗೇರಿದ ನಂತರ ಸತ್ಯನಾರಾಯಣ ಈ ಹುದ್ದೆಗೆ ನಿಯುಕ್ತಿಗೊಂಡಿದ್ದರು. ಇವರ ವರ್ಗಾವಣೆಯ ನಂತರ ಠಾಣೆಯಲ್ಲಿ ನಿರೀಕ್ಷಕರ ಹುದ್ದೆ ಖಾಲಿಯಿತ್ತು.

- Advertisement -

Latest News

error: Content is protected !!