Wednesday, June 3, 2026
Homeಕರಾವಳಿಉಡುಪಿಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ನೀರಿಗೆ ಬಿದ್ದು ಸಾವು

ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ನೀರಿಗೆ ಬಿದ್ದು ಸಾವು

- Advertisement -
- Advertisement -

ಬೈಂದೂರು: ಶಿರೂರು ಅಳ್ಳೆಗದ್ದೆಯಲ್ಲಿ ಪಾತಿ ದೋಣಿಯ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರು, ಮೀನುಗಾರಿಕೆಯಿಂದ ಹಿಂದಿರುಗುವ ವೇಳೆಯಲ್ಲಿ ದಡದ ಬಳಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ವ್ಯಕ್ತಿ ಅಳ್ಳೆದೆ ನಿವಾಸಿ ವೆಂಕಟರಮಣ ದುರ್ಗಪ್ನ ಮೊಗೇರ್(65). ಮುಂಜಾನೆ ಐದು ಗಂಟೆಗೆ ವೆಂಕಟರಮಣ ದುರ್ಗಪ್ನ ಅವರು ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದು, ಹಿಂದಿರುವಾಗ ದಡದ ಬಳಿ ನೀರಿಗೆ ಬಿದ್ದಿದ್ದರು ಎಂದು ತಿಳಿದು ಬಂದಿದೆ. ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!