Saturday, June 6, 2026
Homeಅಪರಾಧಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಹೈಕೋರ್ಟ್ ಗರಂ; ಪತ್ನಿ ಸಹಿತ ತಿಮರೋಡಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಹೈಕೋರ್ಟ್...

ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಹೈಕೋರ್ಟ್ ಗರಂ; ಪತ್ನಿ ಸಹಿತ ತಿಮರೋಡಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಹೈಕೋರ್ಟ್ ಆದೇಶ

- Advertisement -
- Advertisement -

ಬೆಂಗಳೂರು :ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಹೈಕೋರ್ಟು ಮತ್ತೆ ಗರಂ ಆದ ಘಟನೆ ನಡೆದಿದೆ.

ಮಹೇಶ್ ಶೆಟ್ಟಿ ತಿಮರೋಡಿ, ನ್ಯಾಯಾಂಗ ನಿಂದನೆ ಹೈಕೋರ್ಟ್ ಅರ್ಜಿ ನಂಬ್ರ: ಸಿ.ಸಿ.ಸಿ ೩೦೪ /೨೦೨೦ ಸಂಬಂಧಿಸಿದಂತೆ ಆದೇಶ ಮಾಡಿದ ನ್ಯಾಯಮೂರ್ತಿಗಳನ್ನು ಅವ್ಯಾಚ್ಯವಾಗಿ ನಿಂದಿಸಿದ ಘಟನೆ ನಡೆದಿದೆ. ಈ ಬಗ್ಗೆ ತಿಮರೋಡಿ ಪರ ವಕೀಲರು ಹೈ ಕೋರ್ಟಿನಲ್ಲಿ ‘ತಿಮರೋಡಿ ಆ ರೀತಿ ಹೇಳಿಕೆ ನೀಡಿದ್ದು ಸರಿಯಲ್ಲ. ಇನ್ನು ಈ ರೀತಿ ಮಾಡದಂತೆ ತಿಳಿ ಹೇಳುವುದಾಗಿ,’ ಹೈಕೋರ್ಟ್ ಗೆ ಹೇಳಿಕೆಯನ್ನು ನೀಡಿರುತ್ತಾರೆ.

ಈ ವಿಚಾರದ ಕುರಿತು ಮಾನ್ಯ ನ್ಯಾಯಾಲಯವು, ತಿಮರೋಡಿ ಅವರು ನ್ಯಾಯಾಲಯಕ್ಕೆ ಜನವರಿ 05 ತಾರೀಖಿನಂದು ಕುದ್ದು ಹಾಜರಾಗುವಂತೆ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಅವರ ಪತ್ನಿಗೆ ಗೌರವಾನ್ವಿತ ನ್ಯಾಯ ಮೂರ್ತಿಗಳಾದ ಪಿ.ಎಸ್. ದಿನೇಶ್ ಕುಮಾರ್ ಹಾಗೂ ಟಿ. ಜಿ. ಶಿವಶಂಕರೇ ಗೌಡ ಅವರ ನ್ಯಾಯಪೀಠ ಆದೇಶ ಮಾಡಿದೆ.

ದೂರುದಾರರ ಪರವಾಗಿ ಖ್ಯಾತ ಹಿರಿಯ ನ್ಯಾಯವಾದಿಗಳಾದ ಶ್ರೀ ಚಂದ್ರನಾಥ ಆರಿಗ ಅವರು ವಾದಿಸಿದರು.

- Advertisement -

Latest News

error: Content is protected !!