Monday, June 8, 2026
Homeಕರಾವಳಿಸೋಮೇಶ್ವರ ಪುರಸಭೆಗೆ ಇಂದು ಚುನಾವಣೆ, ಪುತ್ತೂರು ಮತ್ತು ಉಡುಪಿ ನಗರಸಭೆ ವಾರ್ಡ್ ಗಳಿಗೆ ಉಪಚುನಾವಣೆ

ಸೋಮೇಶ್ವರ ಪುರಸಭೆಗೆ ಇಂದು ಚುನಾವಣೆ, ಪುತ್ತೂರು ಮತ್ತು ಉಡುಪಿ ನಗರಸಭೆ ವಾರ್ಡ್ ಗಳಿಗೆ ಉಪಚುನಾವಣೆ

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ ಪುರಸಭೆಗೆ ಇಂದು ಚುನಾವಣೆ ನಡೆಯಲಿದೆ. 23 ವಾರ್ಡ್ ಗಳಿಗೆ ಮತದಾನ ನಡೆಯಲಿದ್ದು, ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಇಂದು ಚುನಾವಣೆ ನಡೆಯುತ್ತಿದೆ.

ಇದು ಪುತ್ತೂರು ನಗರಸಭೆಯ ವಾರ್ಡ್ ನಂಬರ್ 1 ಮತ್ತು 11 ಸೇರಿ ಎರಡು ವಾರ್ಡ್ ಗಳಿಗೆ ಉಪ ಚುನಾವಣೆ ನಡಯುತ್ತಿದ್ದು, ಉಡುಪಿ ನಗರಸಭೆಯ ವಾರ್ಡ್ 13 ಕ್ಕೆ ಉಪಚುನಾವಣೆ ನಡೆಯುತ್ತಿದೆ.

ರಾಜ್ಯದಲ್ಲಿ ಇಂದು ಒಟ್ಟು ನಾಲ್ಕು ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, 19 ನಗರ ಸ್ಥಳೀಯ ಸಂಸ್ಥೆಗಳ 36 ವಾರ್ಡ್ ಗಳಿಗೆ ಉಪಚುನಾವಣೆ ನಡೆಯುತ್ತಿದೆ.

ಮತದಾನಕ್ಕೆ ಅನುಕೂಲವಾಗುವಂತೆ ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಾರ್ವತ್ರಿಕ ಮತ್ತು ವೇತನ ಸಹಿತ ರಜೆ ನೀಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

- Advertisement -

Latest News

error: Content is protected !!