Tuesday, July 1, 2025
Homeಕರಾವಳಿಬೆಳ್ತಂಗಡಿಯ ಚರ್ಚ್ ರೋಡ್ ನಲ್ಲಿ ಹಾಡುಹಗಲೇ ನಿಲ್ಲಿಸಿದ್ದ ಬೈಕ್ ನಾಪತ್ತೆ

ಬೆಳ್ತಂಗಡಿಯ ಚರ್ಚ್ ರೋಡ್ ನಲ್ಲಿ ಹಾಡುಹಗಲೇ ನಿಲ್ಲಿಸಿದ್ದ ಬೈಕ್ ನಾಪತ್ತೆ

spot_img
- Advertisement -
- Advertisement -

ಬೆಳ್ತಂಗಡಿ : ರೀಪೇರಿಗಾಗಿ ತಂದು ನಿಲ್ಲಿಸಿ ಬೈಕ್ ನಾಪತ್ತೆಯಾಗಿರುವ ಘಟನೆ ಬೆಳ್ತಂಗಡಿಯ ಚರ್ಚ್ ರೋಡ್ ನಲ್ಲಿ ಇಂದು ಸಂಜೆ ನಡೆದಿದೆ‌.

ಬೆಳ್ತಂಗಡಿ ತಾಲೂಕಿನ ಮುಂಡೂರು ಗ್ರಾಮದ ಪರಂಬುಡೆ ನಿವಾಸಿ ಕೆ.ಜಗನ್ನಾಥ್ ಅಚಾರ್ಯ ಎಂಬವರಿಗೆ ಸೇರಿದ KA-21-E-7225 ನಂಬರಿನ ಸ್ಲೇಂಡರ್ ಬೈಕ್ ಹಲವು ಸಮಯಗಳಿಂದ ಉಪಯೋಗಿಸದೆ ಮನೆಯಲ್ಲಿ ನಿಲ್ಲಿಸಿದ್ದಲ್ಲಿಯೇ ಇತ್ತು.

ಬೈಕ್ ಉಪಯೋಗಿಸದೆ ಇತ್ತಿಚೆಗೆ ಸರಿಯಾಗಿ ಚಲಾಯಿಸಲು ಆಗುತ್ತಿರಲ್ಲಿಲ್ಲ‌. ಬೈಕ್ ಸಂಪೂರ್ಣ ರಿಪೇರಿ ಮಾಡಲು ತಮ್ಮ ರಮೇಶ್ ಆಚಾರ್ಯನಿಗೆ ತಿಳಿಸಿದಂತೆ ಡಿ.26 ರಂದು ಬೆಳಗ್ಗೆ ಮನೆಯಿಂದ ತಂದು ಚರ್ಚ್ ರೋಡ್ ಬಳಿ ಪಾರ್ಕ್ ಮಾಡಿ ತಮ್ಮ ರಮೇಶ್ ಅಚಾರ್ಯ ಚಿನ್ನದ ಕೆಲಸಕ್ಕಾಗಿ ಪುತ್ತೂರಿಗೆ ಹೋಗಿ ಸಂಜೆ ಬಂದು ನಿಲ್ಲಿಸಿದ ಸ್ಥಳದಲ್ಲಿ ನೋಡಿದಾಗ ಬೈಕ್ ನಾಪತ್ತೆಯಾಗಿದೆ.ಈ ಬಗ್ಗೆ ರಮೇಶ್ ಅಚಾರ್ಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬೈಕ್ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.

- Advertisement -
spot_img

Latest News

error: Content is protected !!