Thursday, June 4, 2026
Homeಕರಾವಳಿಬೆಳ್ತಂಗಡಿ :ಅಳದಂಗಡಿ ಸೊಸೈಟಿ ಚುನಾವಣೆ: ಬಿಜೆಪಿಯ ಅಧಿಕಾರದ ಆಸೆಗಾಗಿ ಚುನಾವಣೆ ನಡೆಯುವುದು: ಮಾಜಿ ಅಧ್ಯಕ್ಷ ಧರ್ಣಪ್ಪ...

ಬೆಳ್ತಂಗಡಿ :ಅಳದಂಗಡಿ ಸೊಸೈಟಿ ಚುನಾವಣೆ: ಬಿಜೆಪಿಯ ಅಧಿಕಾರದ ಆಸೆಗಾಗಿ ಚುನಾವಣೆ ನಡೆಯುವುದು: ಮಾಜಿ ಅಧ್ಯಕ್ಷ ಧರ್ಣಪ್ಪ ಪೂಜಾರಿ ಹೇಳಿಕೆ

- Advertisement -
- Advertisement -

ಬೆಳ್ತಂಗಡಿ: ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಅಧಿಕಾರದ ಆಸೆಗಾಗಿ ಚುನಾವಣೆ ಎದುರಿಸುವಂತಾಗಿದೆ ಎಂದು ಮಾಜಿ ಅಧ್ಯಕ್ಷ ಧರ್ಣಪ್ಪ ಪೂಜಾರಿ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.

ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 12 ನಿರ್ದೆಶಕರುಗಳನ್ನೊಳಗೊಂಡ ಆಡಳಿತ ಮಂಡಳಿ ಇದ್ದು ಈ ಬಗ್ಗೆ ಚುನಾವಣೆ ನಡೆಸದೇ 6 ಬಿಜೆಪಿ ಹಾಗೂ 6 ಕಾಂಗ್ರೆಸ್ ಬೆಂಬಲಿತ ನಿರ್ದೆಶಕರುಗಳನ್ನು ಅವಿರೋಧ ಆಯ್ಕೆ ಮಾಡುವ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಬಳೆಂಜದಲ್ಲಿ ಸೊಸೈಟಿ ಮಾಡುವ ಬಗ್ಗೆಯೂ ಈ ಪ್ರಸ್ತಾಪ ಮಾಡಲಾಗಿತ್ತು ಇದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದ್ದರು. ಅದರೆ ಇದೀಗ ಅಧಿಕಾರದ ಆಸೆಗಾಗಿ ಬಿಜೆಪಿ ಬೆಂಬಲಿತರು ಚುನಾವಣೆ ನಡೆಸಲು ಮುಂದಾಗಿದ್ದಾರೆ. ಇದರಿಂದ ಅಸಾಮಾಧಾನಗೊಂಡಿರುವ ಹಿರಿಯ ಅಳದಂಗಡಿ ಸೊಸೈಟಿ ಮಾಜಿ ಅಧ್ಯಕ್ಷ ಧರ್ಣಪ್ಪ ಪೂಜಾರಿಯವರು  ಪ್ರತಿಕ್ರಿಯಿಸಿದರು‌‌.

ಕಳೆದ ಹಲವಾರು ವರ್ಷಗಳಿಂದ ಬಳೆಂಜದಲ್ಲಿ ಪ್ರತ್ಯೇಕ ಸೊಸೈಟಿ ಮಾಡಬೇಕು ಎಂಬ ಬಗ್ಗೆ ಯೋಚನೆಯಲ್ಲಿದ್ದು ಈ ಬಗ್ಗೆ ಈ ಬಾರಿಯಾದರೂ ಮಾಡಬೇಕು ಎಂಬ ಬಗ್ಗೆ ಯೋಚನೆ ಇತ್ತು ಅದಕ್ಕಾಗಿಯೇ ರಾಜಕೀಯ ರಹಿತವಾಗಿ ಬಿಜೆಪಿಯವರಲ್ಲಿ ಒಮ್ಮತದ ನಿರ್ಧಾರವನ್ನು ನಾವು ತಿಳಿಸಿದ್ದೇವು  ಅದರೆ  ಬಿಜೆಪಿಯವರಿಗೆ ಸೊಸೈಟಿ ಆಗುವುದಕ್ಕಿಂತಲೂ ಅಧಿಕಾರ  ಹಿಡಿಯಬೇಕು ಎಂಬ ಯೋಚನೆಯಿಂದಾಗಿ ಚುನಾವಣೆ ನಡೆಯುತ್ತಿದೆ. ಒಂದು ವೇಳೆ ಕಾಂಗ್ರೆಸ್ ಬೆಂಬಲಿತರು ಜಯಗಳಿಸಿದರೆ ಆರು ತಿಂಗಳಲ್ಲಿ ಬಳೆಂಜ ದಲ್ಲಿ ಪ್ರತ್ಯೇಕ ಸೊಸೈಟಿ ರಚನೆ ಮಾಡುತ್ತೇವೆ ಎಂದರು.

- Advertisement -

Latest News

error: Content is protected !!