Saturday, June 6, 2026
Homeಕರಾವಳಿಉಜಿರೆ: ಬೆನಕ ಹೆಲ್ತ್ ಸೆಂಟರ್‌ನಲ್ಲಿ ವೈದ್ಯರ ದಿನಾಚರಣೆ

ಉಜಿರೆ: ಬೆನಕ ಹೆಲ್ತ್ ಸೆಂಟರ್‌ನಲ್ಲಿ ವೈದ್ಯರ ದಿನಾಚರಣೆ

- Advertisement -
- Advertisement -

ಬೆಳ್ತಂಗಡಿ: ಉಜಿರೆ ಬೆನಕ ಹೆಲ್ತ್ ಸೆಂಟರ್‌ನಲ್ಲಿ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು. ಕಳೆದ ಐದು ವರ್ಷಗಳಿಂದ ಬೆನಕ ಹೆಲ್ತ್ ಸೆಂಟರಿನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿ, ಪ್ರತೀ ವರ್ಷ ಓರ್ವ ಹಿರಿಯ ವೈದ್ಯರನ್ನು ಸನ್ಮಾನಿಸಲಾಗುತ್ತಿದೆ. ಪ್ರಸ್ತುತ ವರ್ಷ ಉಜಿರೆಯ ಹಿರಿಯ ವೈದ್ಯ ಡಾ. ಪ್ರಕಾಶ್ ಬಿ. ಅವರನ್ನು ಸನ್ಮಾನಿಸಲಾಯಿತು.

ಬೆನಕ ಹೆಲ್ತ್ ಸೆಂಟರ್‌ನ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲಕೃಷ್ಣ ಅವರು ಸನ್ಮಾನಿತರ ಕುರಿತು ಮಾತನಾಡಿ ಶುಭ ಹಾರೈಸಿದರು. ಇದೇ ಸಂದರ್ಭ ಡಯಾಲಿಸಿಸ್ ಸೇವೆಗಾಗಿ ಶಿಶಿಲದಿಂದ ಬೆಳ್ತಂಗಡಿಗೆ ಹೋಗಿ ಬರಲು ಕಷ್ಟ ಇರುವ ಶಿಶಿಲದ ನಿವಾಸಿ 65 ಹರೆಯದ ತಿಮ್ಮಪ್ಪ ಅವರನ್ನು ಬೆನಕ ಆಸ್ಪತ್ರೆಯಲ್ಲೇ ಒಳರೋಗಿಯಾಗಿ ದಾಖಲಿಸಿದ್ದು, ಆಸ್ಪತ್ರೆಯಿಂದ ಅನುವು ಮಾಡಿಕೊಡಲಾಗಿದೆ ಮತ್ತು ಉಚಿತ ಚಿಕಿತ್ಸೆ ನೀಡುತ್ತಿರುವುದಾಗಿ ಡಾ.ಗೋಪಾಲಕೃಷ್ಣ ತಿಳಿಸಿದರು.

ಡಾ.ಭಾರತಿ.ಜಿ.ಕೆ., ನಾಗಕುಮಾರಿ ಪ್ರಕಾಶ್ ಉಪಸ್ಥಿತರಿದ್ದರು. ಆಸ್ಪತ್ರೆಯ ಪ್ರದಾನ ವ್ಯವಸ್ಥಾಪಕ ದೇವಸ್ಯ ವರ್ಗಿಸ್ ಪ್ರಸ್ತಾವಿಸಿದರು. ಆಸ್ಪತ್ರೆ ಪಿ.ಆರ್.ಓ. ಎಸ್. ಜಿ. ಭಟ್ ಕಾರ್ಯಕ್ರಮ ನಿರ್ವಹಿಸಿದರು.

- Advertisement -

Latest News

error: Content is protected !!