Sunday, May 5, 2024
Homeಉದ್ಯಮ'ಕೊರೊನಾ' ಆತಂಕದ ನಡುವೆಯೂ ಭರ್ಜರಿ 'ಮದ್ಯ' ಮಾರಾಟ: ರಾಜ್ಯಕ್ಕೆ ಹರಿದು ಬಂದ ಆದಾಯ ಎಷ್ಟು ಗೊತ್ತೇ.?

‘ಕೊರೊನಾ’ ಆತಂಕದ ನಡುವೆಯೂ ಭರ್ಜರಿ ‘ಮದ್ಯ’ ಮಾರಾಟ: ರಾಜ್ಯಕ್ಕೆ ಹರಿದು ಬಂದ ಆದಾಯ ಎಷ್ಟು ಗೊತ್ತೇ.?

spot_img
- Advertisement -
- Advertisement -

ಬೆಗಳೂರು: ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆ ಎದುರಾಗಿರುವಾಗ ತುಂಬ ಅಗತ್ಯ ಇರುವ ಹಣಕಾಸು ಆದಾಯದ ಮೂಲ ಹೆಚ್ಚಾಗಿದೆ. ಮೇ ತಿಂಗಳಲ್ಲಿ ಮದ್ಯ ಮಾರಾಟದ ಮೂಲಕ 1,400 ಕೋಟಿ ರುಪಾಯಿ ಆದಾಯ ಬಂದಿತ್ತು. ಆದರೆ ಆಶ್ಚರ್ಯವೆಂಬಂತೆ ಜೂನ್ ತಿಂಗಳಲ್ಲಿ ಮದ್ಯ ಮಾರಾಟದಿಂದ 2460 ಕೋಟಿ ರುಪಾಯಿ ಆದಾಯ ಬಂದಿದೆ. ಮೇ ತಿಂಗಳಿಗೆ ಹೋಲಿಸಿದರೆ ಇದು ಹೆಚ್ಚು.

ಲೈಸೆನ್ಸ್ ಶುಲ್ಕದಲ್ಲಿನ ಹೆಚ್ಚಳ ಮತ್ತು ಹಲವು ಮಳಿಗೆಗಳಿಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದರಿಂದ ಆದಾಯದಲ್ಲಿ ಗಮನಾರ್ಹವಾದ ಏರಿಕೆ ಆಗಿದೆ. ಒಟ್ಟು 2,460 ಕೋಟಿ ರುಪಾಯಿಯ ಆದಾಯದ ಪೈಕಿ 2,000 ಕೋಟಿ ಬಂದಿರುವುದು ಭಾರತೀಯ ಮದ್ಯದಿಂದ ಹಾಗೂ 190 ಕೋಟಿ ರುಪಾಯಿ ಬಿಯರ್ ಮಾರಾಟದಿಂದ ಎಂದು ಕರ್ನಾಟಕ ಅಬಕಾರಿ ಇಲಾಖೆ ತಿಳಿಸಿದೆ.

ಹೀಗಾಗಿ ನಮ್ಮಿಂದಲೇ ಸರ್ಕಾರಕ್ಕೆ ಆದಾಯ ಬರುತ್ತಿದೆ, ಸರ್ಕಾರದ ಖಜಾನೆಗೆ ಹಣ ಹರಿದು ಬರುತ್ತಿದೆ ಎಂದು ಮದ್ಯ ಪ್ರಿಯರು ಬೀಗುತ್ತಿದ್ದಾರೆ.

- Advertisement -
spot_img

Latest News

error: Content is protected !!