Thursday, June 4, 2026
Homeತಾಜಾ ಸುದ್ದಿಲೋಕಸಭೆ ಕಲಾಪದ ವೇಳೆ ಅಪರಿಚಿತರ ಓಡಾಟ; ನೂತನ ಸಂಸತ್ ಭವನದಲ್ಲಿ ಉಂಟಾದ ಭದ್ರತಾ ಲೋಪ

ಲೋಕಸಭೆ ಕಲಾಪದ ವೇಳೆ ಅಪರಿಚಿತರ ಓಡಾಟ; ನೂತನ ಸಂಸತ್ ಭವನದಲ್ಲಿ ಉಂಟಾದ ಭದ್ರತಾ ಲೋಪ

- Advertisement -
- Advertisement -

ಇಬ್ಬರು ಅಪರಿಚಿತರು ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ವೀಕ್ಷಕರ ಗ್ಯಾಲರಿಯಿಂದ ಸದನಕ್ಕೆ ನುಗ್ಗಿರುವ ಘಟನೆ ಇಂದು ವರದಿಯಾಗಿದೆ. 

ನೂತನ ಸಂಸತ್ ಭವನದಲ್ಲಿ ನಡೆಯುತ್ತಿದ್ದ ಕಲಾಪದ ವೇಳೆ ಸಂಸದರು ಕುಳಿತುಕೊಳ್ಳುವ ಬೆಂಚುಗಳ ಮೇಲೆ ಅಪರಿಚಿತರು ಓಡಾಡಿದ್ದು, ಅಪರಿಚಿತರಿಬ್ಬರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಇನ್ನು ನೂತನ ಸಂಸತ್ ಭವನದಲ್ಲಿ ಉಂಟಾದ ಭದ್ರತಾ ಲೋಪದಿಂದ ಸಂಸದರು ಗಲಿಬಿಲಿ ಹಾಗೂ ಭಯಗೊಂಡ ಘಟನೆ ನಡೆಯಿತು. ಈ ಕಾರಣದಿಂದ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!