Friday, June 5, 2026
Homeಕರಾವಳಿಮಂಗಳೂರು: ಅಂತಾರಾಜ್ಯ ಸ್ಪಿರಿಟ್ ಮಾರಾಟ ದಂಧೆ ಮೇಲೆ ದಾಳಿ:ಅಬಕಾರಿ ಪೊಲೀಸರಿಂದ ಮೂವರು ಅರೆಸ್ಟ್, ಓರ್ವ ಪರಾರಿ

ಮಂಗಳೂರು: ಅಂತಾರಾಜ್ಯ ಸ್ಪಿರಿಟ್ ಮಾರಾಟ ದಂಧೆ ಮೇಲೆ ದಾಳಿ:ಅಬಕಾರಿ ಪೊಲೀಸರಿಂದ ಮೂವರು ಅರೆಸ್ಟ್, ಓರ್ವ ಪರಾರಿ

- Advertisement -
- Advertisement -

ಮಂಗಳೂರು: ಅಂತರಾಜ್ಯ ಸ್ಪಿರಿಟ್ ಮಾರಾಟ ದಂಧೆಯನ್ನು  ಪತ್ತೆ ಹಚ್ಚಿರುವ ಅಬಕಾರಿ ಪೊಲೀಸರು ದಾಳಿ ನಡೆಸಿ ಮದ್ಯಸಾರ ಮತ್ತು ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಕೇರಳದ ಗಡಿಭಾಗವಾಗಿರುವ ತಲಪಾಡಿ ಸಮೀಪದ ಕಿನ್ಯಾ ಗ್ರಾಮದ ಸಾಂತ್ಯ ಎಂಬಲ್ಲಿ ಮನೆಯಲ್ಲಿ ನಡೆಯುತ್ತಿದ್ದ ದಂಧೆಯ ಮಾಹಿತಿ ಪಡೆದು ದಾಳಿ ನಡೆಸಲಾಗಿದ್ದು, ಆರೋಪಿ ನಿತ್ಯಾನಂದ ಭಂಡಾರಿ  ಎಂಬಾತ ಪರಾರಿಯಾಗಿದ್ದಾನೆ.

ದಾಳಿಯ ವೇಳೆಯಲ್ಲಿ 2240 ಲೀಟರ್ ಮದ್ಯ ಸಾರ ಮತ್ತು 222 ಲೀಟರ್ ನಕಲಿ ಬ್ರಾಂಡಿ ಸಹಿತ ಯಂತ್ರಗಳನ್ನು  ವಶಕ್ಕೆ ಪಡೆಯಲಾಗಿದ್ದು,  ಕೇರಳ ರಾಜ್ಯಕ್ಕೆ ಸಾಗಾಟ ನಡೆಸಲು ದಂಧೆ ನಡೆಸಲಾಗುತ್ತಿತ್ತು ಎಂದು ಹೇಳಲಾಗಿದೆ.

ಇನ್ನು ದಾಳಿಯ ವೇಳೆ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ತಲಪಾಡಿ ನಿವಾಸಿ ಸತೀಶ್, ಕುಂಜತ್ತೂರು ನಿವಾಸಿಗಳಾದ ನೌಷಾದ್ ಮತ್ತು ಅನ್ಸೀಫ್ ಬಂಧಿತರಾಗಿದ್ದಾರೆ.

ಅಬಕಾರಿ ನಿರೀಕ್ಷಕರ ನೇತೃತ್ವದಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಜನ ಅಬಕಾರಿ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

- Advertisement -

Latest News

error: Content is protected !!