Friday, June 5, 2026
Homeಕರಾವಳಿಬೆಳ್ತಂಗಡಿ; ಬಸ್ ಹತ್ತುವಾಗ ಮಹಿಳೆಯ ಚಿನ್ನದ ಸರ ಕಳ್ಳತನ

ಬೆಳ್ತಂಗಡಿ; ಬಸ್ ಹತ್ತುವಾಗ ಮಹಿಳೆಯ ಚಿನ್ನದ ಸರ ಕಳ್ಳತನ

- Advertisement -
- Advertisement -

ಬೆಳ್ತಂಗಡಿ; ಬಸ್ ಹತ್ತುವಾಗ ಮಹಿಳೆಯ ಚಿನ್ನದ ಸರ ಕಳ್ಳತನ ಮಾಡಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ನಿವಾಸಿ ವಾರಿಜ ಅವರು ದಿನಾಂಕ  12.12.2023 ರಂದು ಸಂಜೆ ಬೆಳ್ತಂಗಡಿ ಬಸ್ಸು ನಿಲ್ದಾಣದಲ್ಲಿ ಧರ್ಮಸ್ಥಳಕ್ಕೆ ಹೋಗುವ ಕೆ ಎಸ್‌ ಆರ್‌ ಟಿ ಸಿ  ಬಸ್ಸು ಹತ್ತುವಾಗ ಯಾರೋ ಅವರ ಕುತ್ತಿಗೆಯಲ್ಲಿದ್ದ ಸರವನ್ನು ಎಳೆದಿದ್ದಾರೆ. ಅಷ್ಟರಲ್ಲಿ ಅವರು ಜೋರಾಗಿ ಕಿರುಚಿದ್ದಾರೆ. ಆದರೆ ಯಾರು ಸರ ಕದ್ದಿದ್ದಾರೆ ಅನ್ನೋದು ಮಾತ್ರ ಗೊತ್ತಾಗಿಲ್ಲ. ಚಿನ್ನದ ಸರ  36 ಗ್ರಾಂ  ಇದ್ದು ಅಂದಾಜು ಮೌಲ್ಯ 1.44 ಸಾವಿರ ಇರಬಹುದು ಎನ್ನಲಾಗಿದೆ. ಇನ್ನು ವಾರಿಜ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ: 120/2023 ಕಲಂ:392  IPC ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!