Sunday, June 7, 2026
Homeತಾಜಾ ಸುದ್ದಿಅಂಗಡಿಯಲ್ಲಿ ಬೈಕ್ ಗೆ ಪೆಟ್ರೋಲ್ ಹಾಕುವಾಗ ಸ್ಪೋಟ; ವಿದ್ಯಾರ್ಥಿನಿ ಸಾವು

ಅಂಗಡಿಯಲ್ಲಿ ಬೈಕ್ ಗೆ ಪೆಟ್ರೋಲ್ ಹಾಕುವಾಗ ಸ್ಪೋಟ; ವಿದ್ಯಾರ್ಥಿನಿ ಸಾವು

- Advertisement -
- Advertisement -

ತುಮಕೂರು ಜಿಲ್ಲೆಯಲ್ಲಿ ಮನೆಯ ಅಂಗಡಿಯೊಂದರಲ್ಲಿ ಮೊಂಬತ್ತಿ ಮುಂದೆ ಬಾಟಲಿಯಲ್ಲಿದ್ದ ಪೆಟ್ರೋಲ್ ಅನ್ನು ಬೈಕ್ ಗೆ ಹಾಕುವ ಸಂರ್ದರ್ಭಲ್ಲಿ ಸ್ಪೋಟಗೊಂಡು ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಮೃತಪಟ್ಟ ವಿದ್ಯಾರ್ಥಿನಿಬ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಯಡೆಯೂರು ಹೋಬಳಿಯ ಕಟ್ಟಿಗೇಹಳ್ಳಿ ಗ್ರಾಮದ ಸೌಂದರ್ಯ(16) ಸೌಂದರ್ಯ ಪಟ್ಟಣದ ಮಹಾತ್ಮ ಗಾಂಧಿ ಪದವಿ ಪೂರ್ವ ಕಾಲೇಜಿನಲ್ಲಿ 10ನೇ ತರಗತಿ ಓದುತ್ತಿದ್ದರು.

ಈಕೆ ಮನೆಯ ಅಂಗಡಿಯಲ್ಲಿ ವಿದ್ಯುತ್‌ ಇಲ್ಲದ ಸಂದರ್ಭದಲ್ಲಿ ಮೊಂಬತ್ತಿ ಹಚ್ಚಿಯಿಟ್ಟು, ಈ ವೇಳೆಯಲ್ಲಿಯೇ ಸೌಂದರ್ಯ ಬೈಕ್‌ಗೆ ಬಾಟಲಿಯಲ್ಲಿದ್ದ ಪೆಟ್ರೋಲ್ ಅನ್ನು ಹಾಕುತ್ತಿದ್ದಳು. ಆದರೆ ತಕ್ಷಣ ಕರೆಂಟ್ ಬಂದಿದ್ದರಿಂದ ಗಾಬರಿಗೊಂಡ ಸೌಂದರ್ಯ ತನ್ನ ಕೈಯಲ್ಲಿದ್ದ ಪೆಟ್ರೋಲ್ ಬಾಟಲಿಯನ್ನು ಕೆಳಗೆ ಹಾಕಿದ್ದಾಳೆ. ಇದರಿಂದಾಗಿ ಪೆಟ್ರೋಲ್ ಚೆಲ್ಲಿ ಮೇಣದ ಬತ್ತಿಯ ಕಿಡಿಯಿಂದ ಬೆಂಕಿ ಹತ್ತಿಕೊಂಡಿದೆ.

ಬೆಂಕಿ ತೀವ್ರತೆ ಹೆಚ್ಚಿದ್ದು, ಅಂಗಡಿ ಸಾಮಾಗ್ರಿಗಳು ಬೆಂಕಿಗೆ ಆಹುತಿಯಾಗಿದೆ. ಅಷ್ಟೇ ಅಲ್ಲದೇ ಘಟನೆ ವೇಳೆ ಸೌಂದರ್ಯ ತೀವ್ರ ಗಾಯಗೊಂಡಿದ್ದಳು. ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಘಟನೆಗೆ ಸಂಬಂಧಿಸಿ ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!