Thursday, June 4, 2026
Homeಕರಾವಳಿಉಡುಪಿಕುಂದಾಪುರ: ಗೆಸ್ಟ್ ಹೌಸ್ ಗೇಟ್ ಕಳಚಿ ಬಿದ್ದು ಆಟವಾಡುತ್ತಿದ್ದ ಮಗು ಸಾವು

ಕುಂದಾಪುರ: ಗೆಸ್ಟ್ ಹೌಸ್ ಗೇಟ್ ಕಳಚಿ ಬಿದ್ದು ಆಟವಾಡುತ್ತಿದ್ದ ಮಗು ಸಾವು

- Advertisement -
- Advertisement -

ಕುಂದಾಪುರ: ಆಟವಾಡುತ್ತಿದ್ದ ಮಗುವಿನ ಮೇಲೆ ಗೆಸ್ಟ್ ಹೌಸ್ ಗೇಟ್ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿದ ಘಟನೆ ಬ್ರಹ್ಮಾವರ ತಾಲೂಕಿನಲ್ಲಿ ನಡೆದಿದೆ.

ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕರೆಯಲ್ಲಿ ಘಟನೆ ನಡೆದಿದ್ದು, ಸುಧೀರ್ ಮೊಗವೀರ ಎಂಬವರ ಪುತ್ರ ಸುಶಾಂತ್ ಮೃತಪಟ್ಟಿದ್ದಾನೆ. ಮನೆಯ ಪಕ್ಕದಲ್ಲಿರುವ ಗೆಸ್ಟ್ ಹೌಸ್ ಬಳಿ ಪ್ರತಿನಿತ್ಯ ಸುಶಾಂತ್ ಆಟವಾಡುತ್ತಿದ್ದು, ನಿನ್ನೆ ಆಟವಾಡುತ್ತಿದ್ದ ವೇಳೆ ಗೆಸ್ಟ್ ಹೌಸ್ ಗೇಟ್ ಮಗುವಿನ ಮೇಲೆ ಕಳಚಿ ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದು, ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!