Sunday, June 7, 2026
HomeUncategorizedಮಂಗಳೂರು ಸಹಾಯಕ ಪೊಲೀಸ್ ಕಮೀಷನರ್ ಗೆ ಕೊರೊನಾ ಪಾಸಿಟಿವ್

ಮಂಗಳೂರು ಸಹಾಯಕ ಪೊಲೀಸ್ ಕಮೀಷನರ್ ಗೆ ಕೊರೊನಾ ಪಾಸಿಟಿವ್

- Advertisement -
- Advertisement -

ಮಂಗಳೂರು: ಸದ್ಯ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ, ಕೊರಾನಾ ವಾರಿಯರ್ಸ್ ಗಳನ್ನು ಟಾರ್ಗೇಟ್ ಮಾಡಿದಂತಿದೆ. ದಿನದಿಂದ ದಿನಕ್ಕೆ  ಕೊರೊನಾ ಸೋಂಕಿಗೆ ಒಳಗಾಗುತ್ತಿರುವ ಕೊರೊನಾ ವಾರಿಯರ್ಸ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಜಿಲ್ಲೆಯ ಕೆಲವು ಪೊಲೀಸ್ ಸಿಬ್ಬಂದಿ ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೀಗಿರುವಾಗಲೇ ನಗರದ ಸಹಾಯಕ ಪೊಲೀಸ್ ಕಮೀಷನರ್ ಒಬ್ಬರಿಗೆ ಕೊರೊನಾ ಇರೋದು ದೃಢಪಟ್ಟಿದೆ.ಇದು ಪೊಲೀಸ್ ಸಿಬ್ಬಂದಿಯ ಆತಂಕಕ್ಕೆ ಕಾರಣವಾಗಿದೆ. ಕರ್ತವ್ಯ ನಿರ್ವಹಿಸುವಾಗ ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡ್ರು ಕೊರೊನಾ ಹಬ್ಬುತ್ತಿರುವ ವೇಗ ನೋಡಿದ್ರೆ ಇದು ಮುಂದೆ ಎಲ್ಲಿಗೆ ಹೋಗಿ ಮುಟ್ಟುತ್ತೋ ಅನ್ನೋ ಭಯ ಕಾಡುತ್ತಿದೆ

- Advertisement -

Latest News

error: Content is protected !!